Breaking News

ಈ ವರ್ಷದ ಮೊದಲ ಚಂದ್ರ ಗ್ರಹಣ ಶುಕ್ರವಾರ

Spread the love

ಬೆಂಗಳೂರು: ಈ ವರ್ಷದ ಮೊದಲ ಚಂದ್ರ ಗ್ರಹಣ ಶುಕ್ರವಾರ ಸಂಭವಿಸಲಿದೆ.

ಆದ್ರೆ ಭಾರತದಲ್ಲಿ ಈ ಚಂದ್ರ ಗ್ರಹಣ ದರ್ಶನವಾಗುವುದಿಲ್ಲ. ಈ ವರ್ಷದ ಪ್ರಥಮ ಸೂರ್ಯ ಗ್ರಹಣ ಸಂಭವಿಸಿ 15 ದಿನ ಕಳೆದಿದೆ. ಇದರ ಬೆನ್ನಲ್ಲೇ ಚಂದ್ರ ಗ್ರಹಣ ಸಹ ಸಂಭವಿಸುತ್ತಿದೆ. ವೈಶಾಖ ಮಾಸದ ಹುಣ್ಣಿಮೆ ಆಗಿದ್ದು, ಈ ಸಂದರ್ಭ ಚಂದ್ರ ಗ್ರಹಣ ನಡೆಯಲಿದೆ.

ಪೆನಂಬ್ರಲ್ ಚಂದ್ರ ಗ್ರಹಣ: ಈ ವರ್ಷದ ಮೊದಲ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸಲಿಲ್ಲ. ಈಗ ವರ್ಷದ ಮೊದಲ ಚಂದ್ರ ಗ್ರಹಣ ಬುದ್ಧ ಪೂರ್ಣಿಮೆ ದಿನ ಜರುಗಲಿದೆ. ಈ ಗ್ರಹಣವು ಪೆನಂಬ್ರಲ್ ಚಂದ್ರ ಗ್ರಹಣವಾಗಿದೆ.

ಇದರಲ್ಲಿ ಚಂದ್ರನ ಮೇಲ್ಮೈ ಧೂಳಿನ ಬಿರುಗಾಳಿಯಂತೆ ಕಾಣಿಸಲಿದೆ.ಎಲ್ಲೆಲ್ಲಿ ಗೋಚವಾಗುತ್ತೆ ಈ ಚಂದ್ರ ಗ್ರಹಣ?: ಖಗೋಳಶಾಸ್ತ್ರಜ್ಞರ ಪ್ರಕಾರ, ವರ್ಷದ ಮೊದಲ ಚಂದ್ರ ಗ್ರಹಣವು ಯುರೋಪ್, ಏಷ್ಯಾದ ಹೆಚ್ಚಿನ ಭಾಗಗಳು, ಆಸ್ಟ್ರೇಲಿಯಾ, ಆಫ್ರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಕ್ಟಿಕಾ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ. ಭಾರತದಲ್ಲಿ ಈ ಚಂದ್ರ ಗ್ರಹಣದ ನೋಟಕ್ಕೆ ಸಂಬಂಧಿಸಿದಂತೆ, ಹೆಚ್ಚಿನ ಖಗೋಳಶಾಸ್ತ್ರ ತಜ್ಞರು ಮತ್ತು ಹಿಂದೂ ಪಂಚಾಂಗ ಲೆಕ್ಕಾಚಾರಗಳ ಆಧಾರದ ಮೇಲೆ ಈ ಚಂದ್ರ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.

ಚಂದ್ರ ಗ್ರಹಣ ಕಾಲಾವಧಿ: ಭಾರತೀಯ ಕಾಲಮಾನದ ಪ್ರಕಾರ, ವರ್ಷದ ಮೊದಲ ಚಂದ್ರ ಗ್ರಹಣವು ಮೇ 5ರಂದು ರಾತ್ರಿ 8:44ಕ್ಕೆ ಪ್ರಾರಂಭವಾಗಲಿದ್ದು, ಇದು ಮಧ್ಯರಾತ್ರಿಯವರೆಗೆ ಅಂದರೆ ಮಧ್ಯಾಹ್ನ 1.01 ರವರೆಗೆ ಮುಂದುವರಿಯುತ್ತದೆ. ಗ್ರಹಣದ ಗರಿಷ್ಠ ಅವಧಿ ರಾತ್ರಿ 10:52ಕ್ಕೆ ಇರುತ್ತದೆ. ಇದು ಪೆನಂಬ್ರಲ್ ಚಂದ್ರ ಗ್ರಹಣವಾಗಲಿದೆ. ಭೂಮಿಯ ನೆರಳು ನೇರವಾಗಿ ಚಂದ್ರನ ಮೇಲೆ ಬೀಳದಿದ್ದಾಗ, ಅದನ್ನ ಪೆನಂಬ್ರಲ್ ಚಂದ್ರ ಗ್ರಹಣ ಎಂದು ಕರೆಯಲಾಗುತ್ತದೆ


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ