ಬೆಳಗಾವಿ: ತಮ್ಮಿಷ್ಟದ ಶಾಸಕರು ಅಧಿಕಾರಕ್ಕೆ ಬರಬೇಕೆಂದು ಅಭಿಮಾನಿಗಳ ಆಸೆ ಪಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಅಭಿಮಾನಿಗೆ ಆಸೆ ಮಾತ್ರವಲ್ಲ, ಹರಕೆಯನ್ನು ಕಟ್ಟಿಕೊಂಡಿದ್ದಾನೆ. ಬರೋಬ್ಬರಿ 18 ಕಿ.ಮೀ ದೂರ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ದೇವರಿಕೆ ಹರಕೆ ಕಟ್ಟಿಕೊಂಡಿದ್ದಾನೆ.
ಬಿಜೆಪಿಯಿಂದ ಬಾಲಚಂದ್ರ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ. ಅರವಿಭಾವಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಹಾಗಾಗಿ ಈ ಕ್ಷೇತ್ರದಿಂದ ಅತಿ ಹೆಚ್ಚಿನ ಲೀಡ್ ನಿಂದ ಅವರನ್ನು ಗೆಲ್ಲಿಸುವಂತೆ ರಮೇಶ್ ತಿಗಡಿ ಎಂಬಾತ ಹರಿಕೆ ಕಟ್ಟಿಕೊಂಡಿದ್ದಾನೆ. ಗೋಕಾಕ್ ನ ಮಹಾಲಕ್ಷ್ಮೀ ಗೆ ಅತಿ ಹೆಚ್ಚಿನ ಲೀಡ್ ನಿಂದ ಗೆಲ್ಲಿಸುವಂತೆ ಹರಕೆ ಹೊತ್ತುಕೊಂಡಿದ್ದಾನೆ.
ರಮೇಶ್ ತಿಗಡಿ ಬರೋಬರಿ 18 ಕಿ.ಮೀ.ದೂರದಿಂದ ದೀರ್ಘದಂಡ ನಮಸ್ಕಾರದ ಹರಕೆ ಕಟ್ಟಿಕೊಂಡಿದ್ದಾನೆ.
ಮೂಡಲಗಿ ತಾಲೂಕಿನ ಚಿಗಡೋಳ್ಳಿ ಗ್ರಾಮದಿಂದ ಗೋಕಾಕ್ ಲಕ್ಷ್ಮೀ ದೇವಸ್ಥಾನದವರೆಗೆ ಈ ದೀರ್ಘದಂಡ ನಮಸ್ಕಾರದ ಹರಕೆಯನ್ನು ಈಡೇರಿಸುತ್ತಿದ್ದಾನೆ. ರಮೇಶ್ ತಿಗಡಿಗೆ ಆತನ ಸಂಬಂಧಿಗಳ ಸಾಥ್ ನೀಡುತ್ತಿದ್ದಾರೆ. ಜೊತೆಗೆ ದಾರಿಯುದ್ಧಕ್ಕೂ ಬಾಜಾ ಭಜಂತ್ರಿ ಮೂಲಕ ಕರೆದೊಯ್ಯುತ್ತಿದ್ದಾರೆ.
Laxmi News 24×7