ಬೆಂಗಳೂರು: ಬಿಜೆಪಿ ಸರ್ಕಾರದ ವೈಫಲ್ಯ, ಬಸವರಾಜ ಬೊಮ್ಮಾಯಿ ಅವರ ಅಸಾಮರ್ಥ್ಯವೇ ಮಹಾರಾಷ್ಟ್ರದ ಗಡಿ ತಂಟೆಗೆ ಕಾರಣ. ಚುನಾವಣೆಗಾಗಿ ಏಕಾಏಕಿ ಕರ್ನಾಟಕದ ಮೇಲೆ ವಿಶೇಷ ಪ್ರೀತಿ ಹುಟ್ಟಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುವ ಮೊ-ಶಾ ಜೋಡಿ ಮಹಾರಾಷ್ಟ್ರದಲ್ಲಿನ ತಮ್ಮದೇ ಸರ್ಕಾರದ ಉದ್ಧಟತನಕ್ಕೆ ಕಡಿವಾಣ ಹಾಕುತ್ತಿಲ್ಲವೇಕೆ ಬಿಜೆಪಿ ಎಂದು ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.ಈ ಕುರಿತಂತೆ ಟ್ವಿಟ್ ಮಾಡಿದ್ದು, ರಮೇಶ್ ಜಾರಕಿಹೊಳಿ ಬಿಜೆಪಿಗೆ ದುಬಾರಿ ಮನುಷ್ಯನಾಗಿದ್ದಾರೆ, ಒಂದೆಡೆ ಸವದಿ ಜೊತೆ ಕಿರಿಕ್, ಇನ್ನೊಂದೆಡೆ ಈರಣ್ಣ ಕಡಾಡಿ ಜೊತೆ ಕಿರಿಕ್! ಬಹುಶಃ ಚುನಾವಣೆ ಮುಗಿದರೂ ಬಿಜೆಪಿಯ ಅಭ್ಯರ್ಥಿಗಳ ನಿರ್ಧಾರವಾಗುವುದು ಅನುಮಾನ! ನಾಯಕತ್ವವೇ ಇಲ್ಲದ ಬಿಜೆಪಿಯಲ್ಲಿ ಎಲ್ಲರೂ ನಾನೇ ನಾಯಕ ಎಂದು ಹೊರಟಿದ್ದಾರೆ. #BJPvsBJP ಒಳಜಗಳವೇ ಬಿಜೆಪಿಯನ್ನ ಮುಗಿಸಲಿದೆ ಎಂದಿದೆ.
ಬಿಜೆಪಿಯ ಬಹುತೇಕ ಶಾಸಕರಿಗೆ ಟಿಕೆಟ್ ನೀಡದಂತೆ ಬಿಜೆಪಿ ಕಾರ್ಯಕರ್ತರೇ ಬಂಡಾಯವೆದ್ದಿದ್ದಾರೆ, ಇದು ಸರ್ಕಾರದ ದುರಾಡಳಿತದ ಪರಿಣಾಮವೋ, ಶಾಸಕರ ವೈಫಲ್ಯದ ಕಾರಣವೋ ಬಿಜೆಪಿ ? 40% ಕಮಿಷನ್ ಭ್ರಷ್ಟಾಚಾರದ ಬಿಜೆಪಿ ಅತೀ ಹೀನಾಯ ಆಡಳಿತ ನೀಡಿದೆ ಎನ್ನಲು ಬಿಜೆಪಿ ಕಾರ್ಯಕರ್ತರ ಬಂಡಾಯವೇ ಸಾಕ್ಷಿ ಹೇಳುತ್ತಿದೆ ಎಂದು ವಾಗ್ಧಾಳಿ ನಡೆಸಿದೆ.
Laxmi News 24×7