ಜಿನೇವಾ: ಕನ್ನಡದ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಮೊಳಗಿಸಿದ “ಕಾಂತಾರ’ ನಟ-ನಿರ್ದೇಶಕ ರಿಷಭ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಕನ್ನಡದ ದನಿಯನ್ನು ಹೊಮ್ಮಿಸಿದ್ದಾರೆ.
ಗುರುವಾರ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ರಿಷಭ್, ಭಾರತದ ನಾಗರಿಕ ಸಮಾಜ ತನ್ನ ಪರಿಸರ ವನ್ನು ರಕ್ಷಿಸಲು ಪಣ ತೊಡುತ್ತದೆ.

ಇಂಥ ಪ್ರಜ್ಞೆಗೆ ಸಿನೆಮಾ ಮಾಧ್ಯಮವೂ ನೆರವಾಗುತ್ತದೆ ಎಂದು ಹೇಳುತ್ತ ನಿಸರ್ಗ ಮಯ ಚಿತ್ರ ಕಾಂತಾರದ ಮಹತ್ವವನ್ನು ವಿವರಿಸಿದರು. ಭಾರತದ ಹಲವಾರು ಸಿನೆಮಾಗಳು ವಾಸ್ತ ವಿಕ ಮತ್ತು ಕಾಲ್ಪನಿಕ ಕಥೆಗಳ ಮೂಲಕ ಪರಿಸರದ ಮಹತ್ವವನ್ನು ಜಗತ್ತಿಗೆ ವಿವ ರಿಸುವ ಕೆಲಸ ಮಾಡಿವೆ. ಜತೆಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿವೆ ಎನ್ನಲು ಹೆಮ್ಮೆಯಾಗುತ್ತದೆ ಎಂದರು.
ಇಂದು ಕಾಂತಾರ ಪ್ರದರ್ಶನ
ಪುನೀತ್ ರಾಜ್‌ಕುಮಾರ್ ಹುಟ್ಟಿದ ಹಬ್ಬ ದಂದೇ “ಕಾಂತಾರ’ವನ್ನು ಜಿನೀವಾ ದಲ್ಲಿ ಮಾ. 17ರಂದು ಪ್ರದರ್ಶಿಸಲಾಗುತ್ತದೆ. ಬಳಿಕ ಸಿನೆಮಾದ ಬಗ್ಗೆ ಸಂವಾದ ಕಾರ್ಯ ಕ್ರಮ ನಡೆಯಲಿದೆ.

Laxmi News 24×7