Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ‘ಅತಿಥಿ ಶಿಕ್ಷಕರ ₹49.27 ಲಕ್ಷ ಸಂಬಳ ಪಾವತಿ’

‘ಅತಿಥಿ ಶಿಕ್ಷಕರ ₹49.27 ಲಕ್ಷ ಸಂಬಳ ಪಾವತಿ’

Spread the love

ಗೋಕಾಕ: ‘ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರದಿರಲಿ ಎನ್ನುವ ಉದ್ದೇಶದಿಂದ ಹಾಗೂ ಮೂಡಲಗಿ ಶೈಕ್ಷಣಿಕ ವಲಯವು ಮುಂಚೂಣಿಗೆ ತರುವ ಇದ್ದೇಶದಿಂದ 232 ಸರ್ಕಾರಿ ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರ ಸಂಭಾವನೆಯನ್ನು ನಾನೇ ನೀಡಿದ್ದೇನೆ’ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

 

ಸಮೀಪದ ದುರದುಂಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ಜರುಗಿದ ಮೂಡಲಗಿ ವಲಯದ ಅತಿಥಿ ಶಿಕ್ಷಕರ ವೇತನ ವಿತರಿಸಿ ಮಾತನಾಡಿದ ಅವರು, ‘ಶಿಕ್ಷಕರು ಲಭ್ಯವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿಯು ಸರ್ಕಾರಿ ಶಾಲೆಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ’ ಎಂದು ಹೇಳಿದರು.

‘ಈಗಾಗಲೇ ಮೂಡಲಗಿ ವಲಯದಲ್ಲಿ ಸುಮಾರು 50 ಸಾವಿರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇದು ಬೆಳಗಾವಿ ವಿಭಾಗಗಳ 59 ಶೈಕ್ಷಣಿಕ ವಲಯಗಳ ಪೈಕಿ ಅತಿಹೆಚ್ಚು. ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಈ ಶಿಕ್ಷಕರಿಂದ ಸಾಧ್ಯವಾಗುತ್ತಿದೆ. ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗಿರುವುದು ಗುಣಮಟ್ಟದ ಶಿಕ್ಷಣ ಲಭಿಸುತ್ತಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದರು.

‘ಕಳೆದ ಹಲವು ವರ್ಷಗಳಿಂದ ಅತಿಥಿ ಶಿಕ್ಷಕರ ಗೌರವಧನವನ್ನು ಮಾಸಿಕವಾಗಿ ತಲಾ ₹5,000ದಂತೆ ನಾನೇ ಪಾವತಿಸುತ್ತಿದ್ದೇನೆ. 1992ರಿಂದಲೂ ಅತಿಥಿ ಶಿಕ್ಷಕರಿಗೆ ಗೌರವ ವೇತನ ನೀಡುವ ಸಂಪ್ರದಾಯ ಮುಂದುವರೆಸಿಕೊಂಡು ಬರುತ್ತಿದ್ದೇನೆ. ಇದರಿಂದ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವುದರೊಂದಿಗೆ ಅತಿಥಿ ಶಿಕ್ಷಕರಿಗೂ ಅನುಕೂಲವಾದಂತಾಗಿದೆ’ ಎಂದರು.

‘ವಲಯದಲ್ಲಿ 1,545 ಸರ್ಕಾರಿ ಶಾಲೆಗಳ ಶಿಕ್ಷಕರ ಹುದ್ದೆಗಳಿದ್ದು ಅವುಗಳಲ್ಲಿ 689 ಹುದ್ದೆಗಳು ಖಾಲಿ ಇವೆ. ಅದರಲ್ಲಿ 345 ಅತಿಥಿ ಶಿಕ್ಷಕರಿಗೆ ಮಾತ್ರ ಸರ್ಕಾರ ಗೌರವ ಸಂಭಾವನೆ ನೀಡುತ್ತಿದ್ದು, ಬಾಕಿ ಉಳಿದ ಅತಿಥಿ ಶಿಕ್ಷಕರಿಗೆ ಮಾಸಿಕವಾಗಿ ನಾನು ವೇತನ ನೀಡುತ್ತಿದ್ದೇನೆ. 2022ರ ಮೇ ತಿಂಗಳಿಂದ ನವಂಬರ್‌ವರೆಗಿನ ವೇತನ ಒಟ್ಟು ₹49.27 ಲಕ್ಷ ವಿತರಿಸಿದ್ದೇನೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇದೇ ಸಂದರ್ಭದಲ್ಲಿ ₹16.90 ಲಕ್ಷ ವೆಚ್ಚದ ವಿವೇಕ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ₹10 ಲಕ್ಷ ವೆಚ್ಚದ ಅಮೃತ ಶಾಲಾ ಕೊಠಡಿಗಳ ನವೀಕರಣ ಕಾಮಗಾರಿ ಉದ್ಘಾಟಿಸಿದರು.

ದುರದುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಅಂತರಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಗೋಕಾಕ ತಾಲ್ಲೂಕು ಪಂಚಾಯಿತಿ ಇಒ ಮುರಳೀಧರ ದೇಶಪಾಂಡೆ ಮತ್ತು ಎಫ್.ಜಿ.ಚಿನ್ನನವರ, ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ, ಸಿಡಿಪಿಒ ವೈ.ಕೆ.ಗದಾಡಿ, ನಿವೃತ್ತ ವೈದ್ಯಾಧಿಕಾರಿ ಡಾ.ಆರ್.ಎಸ್. ಬೆಣಚಿನಮರಡಿ, ಮುಖಂಡರು ಇದ್ದರು.


Spread the love

About Laxminews 24x7

Check Also

ಪೆಟ್ರೋಲ್, ಡೀಸೆಲ್‌ ತೆರಿಗೆ ಹೆಚ್ಚಳ: ಎತ್ತುಗಳ ಬಳಸಿ ಸ್ಕೂಟರ್ ಎಳೆದು BJP ಆಕ್ರೋಶ

Spread the love ಬೆಳಗಾವಿ: ಇಂಧನ ತೈಲಗಳ ತೆರಿಗೆ ದರ ಏರಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ನಗರದಲ್ಲಿ ಸೋಮವಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ