ಬೆಳಗಾವಿ: ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ ಮೇಲೆ ಹಿಂಡಲಗಾದಲ್ಲಿ ಶನಿವಾರ ನಡೆದ ಗುಂಡಿನ ದಾಳಿ ಖಂಡಿಸಿ ರಾಜ್ಯಾದ್ಯಂತ ಜ. 8ರಂದು ಶ್ರೀರಾಮಸೇನಾ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು. ಫೈರಿಂಗ್ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆಗ್ರಹಿಸಿದರು.
ಈ ಬಗ್ಗೆ ವಿಡಿಯೋ ಬಿಡುಗಡೆಗೊಳಿಸಿರುವ ಮುತಾಲಿಕ್, ಹಿಂದೂತ್ವ ಸಂಘಟನೆಯಾದ ಶ್ರೀರಾಮಸೇನೆ ದುಷ್ಕರ್ಮಿಗಳ ಗುಂಡು, ಕತ್ತಿಗೆ, ಬಾಂಬ್, ತಲವಾರ್ ಗೆ ಹೆದರುವುದಿಲ್ಲ. ಇಂಥ ದಾಳಿಗೆ ನಾವು ಹೆದರುವವರಲ್ಲ. ಹಿಂದೂಗಳು ಗಟ್ಟಿಯಾಗಿದ್ದಾರೆ, ಧೈರ್ಯದಿಂದ ಇದ್ದಾರೆ. ಇಂಥ ಪುಂಡಾಟಿಕೆಗೆ ನಾವು ಹೆದರುವವರಲ್ಲ ಎಂದರು.
ಬೆಳಗಾವಿ ನಗರದ ಮಹಾದ್ವಾರ ರೋಡ್ ನ ಸಂಭಾಜಿ ಮೈದಾನದಲ್ಲಿ ಜ.8ರಂದು ನಡೆಯಲಿರುವ ಹಿಂದೂ ಸಮಾವೇಶದಲ್ಲಿ ಇಂಥ ಗುಂಡೇಟಿಗೆ ತಕ್ಕಉತ್ತರ ನೀಡಲಾಗುವುದು ಎಂದು ತಿಳಿಸಿದರು
Laxmi News 24×7