ಸುವರ್ಣಸೌಧದಲ್ಲಿ ಕೋವಿಡ್ ಸಭೆ ಜರುಗಿದ ನಂತರ ಕಂದಾಯ ಸಚಿವ ಆರ್ ಅಶೋಕ ಮಾದ್ಯಮಗಳಿಗೆ ಮಾಹಿತಿ ನೀಡಿದರು.
ಚೈನಾ ಹಾಗೂ ಬೇರೆ ದೇಶಗಲ್ಲಿ ಕೋವಿಡ್ ಹೆಚ್ಚಾಗುತ್ತಿರುವದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಬರುವ ಪ್ರಯಾಣಿಕರಿಗೆ ಹೆಚ್ಚಿನ ಗಮನ ಮಾನಿಟರ್ ಮಾಡೋದಕ್ಕೆ ಎರಡು ಕಡೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಪ್ರತಿ ಶಾಲಾ – ಕಾಲೇಜುಗಳಲ್ಲಿ ಸ್ಯಾನಿಟೈಸೇಶನ್, ಮಕ್ಕಳು ಮಾಸ್ಕ್ ಹಾಕೋದು ಕಡ್ಡಾಯವಾಗಿದೆ ಈಗಾಗಲೆ ಶಾಲೆಗಳಿಗೆ ಸೂಚನೆ ಕೊಡಲಾಗಿದೆ. ಬೆಂಗಳೂರು ಬೌರಿಂಗ್ ಮತ್ತು ಮಂಗಳೂರು ವೆನಿಲ್ಲಾ ಆಸ್ಪತ್ರೆಗಳಲ್ಲಿ ಐಸೋಲೇಶನ್ ಸೆಂಟರ್ ಮಾಡಲಾಗಿದೆ.
ಎಲಾ ಆಸ್ಪತ್ರೆಗಳಲ್ಲಿ, ಐಸಿಯು, ಆಕ್ಸಿಜನ್ ವ್ಯವಸ್ಥೆ ಪರಿಶೀಲನೆ ಮಾಡಬೇಕೆಂದು ಸೂಚಿಸಲಾಗಿದೆ. ಬಾರ್, ಪಬ್ ಗಳಲ್ಲಿ ಸಪ್ಲೈಯರ್, ಬರುವವರು, ಹೋಗುವವರು ಎರಡು ಡೋಸ್ ಕಡ್ಡಾಯ, ಎಷ್ಟು ಟೇಬಲ್, ಕುರ್ಚಿಗಳಿದೆಯೋ ಅಷ್ಟೇ ಗ್ರಾಹಕರಿಗೆ ಅವಕಾಶ ನೀಡಲು ತಿಳಿಸಲಾಗುವದು.
ರಸ್ತೆಗಳಲ್ಲಿ ನ್ಯೂ ಇಯರ್ ಸೆಲೆಬ್ರೇಶನ್ ಮಾಡೋರು ಮಾಸ್ಕ್ ಕಡ್ಡಾಯ ಮತ್ತು ರಾತ್ರಿ ಒಂದು ಗಂಟೆಗೆ ಸೆಲೆಬ್ರೇಶನ್ ಎಲ್ಲಾ ಮುಗಿಯಬೇಕು ರೆಸ್ಟೋರೆಂಟ್, ಬಾರ್, ಪಬ್ ಗಳು ಒಂದು ಗಂಟಗೆ ಕ್ಲೋಸ್ಆಗುವಂತೆ ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ಕೊಡುತ್ತೆವೆ. ಈ ನಿಯಮಗಳು ರಾಜ್ಯಾಧ್ಯಂತ ಅನ್ವಯವಾಗಲಿವೆ, ಅಲ್ಲದೆ ಹೊಸವರ್ಷಕ್ಕೆ ಹೊಸ ಗೈಡ್ ಲೈನ್ಸ್ ಜಾರಿ ಮಾಡಲಾಗುವದು ಎಂದು ಕಂದಾಯ ಸಚಿವ ಆರ್ ಅಶೋಕ ಮಾದ್ಯಮಗಳಿಗೆ ಮಾಹಿತಿ ನೀಡಿದರು.
Laxmi News 24×7