ಬಿಜೆಪಿ 40 % ಕಮಿಷನ್ ಸರ್ಕಾರ ಎಂದು ಆರೋಪಿಸಿ ಬಿಜೆಪಿ ಸರ್ಕಾರದ ವಿರುದ್ಧ ಇಂದು ಬೆಳಗಾವಿಯಲ್ಲಿ ಯೂಥ್ ಕಾಂಗ್ರೆಸ್ ಕಾರ್ಯಕರ್ತರಿಂದ ಬ್ರಹತ್ ಪ್ರತಿಭಟನೆ ರ್ಯಾಲಿ ಮಾಡಲಾಯಿತು.
ಯುಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ರ್ಯಾಲಿ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೋಗಿ ಆಕ್ರೋಶ ವ್ಯಕ್ತಪಡಿಸಿದರು. ಬೃಹತ್ ಪ್ರತಿಭಟನೆ ಶಾಸಕಿ ಲಕ್ಷ್ಮಿ ಹೆಬ್ಬಾಳರ್ ಸಾಥ್ ನೀಡಿ ಮಾತನಾಡಿದರು
ಅವರುಯುವಕರಿಗೆ ಎರಡು ಕೋಟಿ ಉದ್ಯೋಗ ಕೋಡ್ತಿವಿ ಎಂದವರು ಪಾಲಾಯನ ಮಾಡಿದ್ದಾರೆ. ಬಿಜೆಪಿ ಸರ್ಕಾರ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. 40 % ನಿಂದ ಯುವಕರು ಹೆಚ್ಚು ನಿರುದ್ಯೋಗಿರಾಗಿದ್ದಾರೆ ಬಿಜೆಪಿ ಸರ್ಕಾರದ ದುರಾಡಳಿತ ವಿರುದ್ಧಯೂತ್ ಕಾಂಗ್ರೆಸ್ ಧ್ವನಿ ಎತ್ತುತಿದೆ ಎಂದರು.ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಮಾತನಾಡಿದ ಅವರು ಬಿಜೆಪಿ ಮೊದಲು ನಮ್ಮ ಉದ್ಯೋಗ ಕಸಿದುಕೊಂಡಿದೆ. ಈಗ ಚಿಲುಮೆ ಎಂಬ ಸಂಸ್ಥೆ ಮೂಲಕ ನಮ್ಮವೋಟ್ ಕದ್ದಿದೆ. ಬಿಜೆಪಿ ಪ್ರಜಾಪ್ರಭುತ್ವ ಕಗ್ಗೋಲೆ ಮಾಡುತ್ತಿದೆ. ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದರೆ ಜನ ಭಯ ಪಡುವಂತಾಗಿದೆ ಎಂದರು
Laxmi News 24×7