Breaking News

ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕ ಬಗ್ಗೆ  ಚರ್ಚೆಯಾಗಬೇಕು ಎಂದ ಮುಖ್ಯಮಂತ್ರಿ ಬೊಮ್ಮಾಯಿ

Spread the love

ಬೆಳಗಾವಿಯಲ್ಲಿ ಜರಗುತ್ತಿರುವ ಅಧಿವೇಶನ ಫಲಪ್ರದವಾಗ ಬೇಕು ಮತ್ತು ಉತ್ತರ ಕರ್ನಾಟಕ ಬಗ್ಗೆ  ಚರ್ಚೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ದೆಹಲಿಗೆ ತೆರಳುವುದಕ್ಕೂ ಮುನ್ನ ಮಾದ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೆಳಗಾವಿ ಅಧಿವೇಶನ ಫಲಪ್ರದ ಆಗಬೇಕು, ಉತ್ತರ ಕರ್ನಾಟಕದ ಬಗ್ಗೆ ಸಮಗ್ರ ಚರ್ಚೆ ಆಗಬೇಕು ಯಾವ ವಿಚಾರಕ್ಕೂ ಕೂಡ ಚರ್ಚೆ ಮಾಡಲು ನಾವು ಸಿದ್ಧ.
ಇಂದು ಮಧ್ಯಾಹ್ನ ದೆಹಲಿಗೆ ಹೋಗ್ತಿದ್ದೇನೆ ಕಳೆದ ಬಾರಿ ಹೋದಾಗ ಸಭೆಗಳು ಅಪೂರ್ಣ ಆಗಿದ್ವು, ಇಂದಿನ ಸಭೆಯಲ್ಲಿ
ನಡ್ಡಾ, ಶಾ ಭಾಗಿಯಾಗ್ತಾರೆ, ಎಲೆಕ್ಷನ್ ತಯಾರಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆಗುತ್ತೆ, ಎಲ್ಲದರ ಬಗ್ಗೆಯೂ ಚರ್ಚೆ ಮಾಡುತ್ತೆನೆ, ಸಾಧ್ಯವಾದ್ರೆ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೆನೆ. ಇಂದು ಕ್ಯಾಬಿನೆಟ್ ನಲ್ಲಿ ಕೋವಿಡ್ ಬಗ್ಗೆ ಚರ್ಚೆ ಆಗಿದೆ.  ಜಾಗೃತಿ ಮೂಡಿಸೋದು, ಬೂಸ್ಟರ್ ಡೋಸ್ ಕಡ್ಡಾಯ ಬಗ್ಗೆ ಚರ್ಚೆ ಮಾಡಲು ಮಧ್ಯಾಹ್ನ ಉನ್ನತ ಮಟ್ಟದ ತಜ್ಞರ ಸಭೆ ನಡೆಯುತ್ತದೆ.

ಜನಜೀವನಕ್ಕೆ ಯಾವುದೇ ತೊಂದರೆ ಆಗದೇ ಇರೋ ರೀತಿ ಮುನ್ನೆಚ್ಚರಿಕೆ ಕ್ರಮ ಜರುಗಿಸಲಾಗುವದು. ನ್ಯೂ ಇಯರ್ ಗೆ ಡೈರೆಕ್ಷನ್ ಇರುತ್ತೆ, ಕೆಲವು ನಿಯಮಗಳನ್ನ ಆ್ಯಡ್ ಮಾಡಲಾಗುತ್ತೆ ಆರ್ಥಿಕತೆ ಮೇಲೆ ಪರಿಣಾಮ ಬೀರದ ರೀತಿ ಇಂಪ್ಲಿಮೆಂಟ್ ಮಾಡುತ್ತೆವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ