Breaking News

ನಮ್ಮ ತಾಲೂಕಾ ಆಡಳಿತಕ್ಕೆ ನಾಚಿಗೆ ಆಗಬೇಕು, ತಹಶೀಲ್ದಾರರ ಏನು ಕಣ್ಮುಚ್ಚಿ ಕುಳಿತಿದಿರಾ: ಬಸನಗೌಡ ಪಾಟೀಲ

Spread the love

ಖಾನಾಪೂರ ತಾಲೂಕಿನ ತೋಲಗಿ ಗ್ರಾಮದಲ್ಲಿ ಗಂಟು ರೋಗ ಬಾಧೆಯಿಂದ ಮತ್ತೊಂದು ಜಾನುವಾರು ಬಲಿ, ಶಂಕರ್ ದೊಡ್ಡಪ್ಪನವರ ಎಂಬುವರ 70000 ರೂಪಾಯಿ ಕಿಮ್ಮತ್ತಿನ ಆಕಳು ಗಂಟು ರೋಗ ಬಾಧೆಯಿಂದ ಮರಣಹೊಂದಿತ್ತು.

ಹೌದು ಖಾನಾಪೂರ ತಾಲೂಕಿನಲ್ಲಿ ಇತ್ತಿಚಿನ ದಿನಗಳಲ್ಲಿ ಗಂಟು ರೋಗ ಬಾಧೆಯಿಂದ ಜಾನುವಾರು ಮರಣಹೊಂದುತ್ತಿವೆ. ಸರಿಯಾದ ಚಿಕಿತ್ಸೆ ಕಾಣದೇ ಜಾನುವಾರು ಮರಣ ಹೊಂದುತ್ತಿವೆ ಅದರಲ್ಲಿ ಪಶು ವೈದ್ಯರ ಕೊರತೆ ಕೂಡ ಎದ್ದು ಕಾಣುತ್ತಿದ್ದು ಕೇವಲ ಸಹಾಯಕ ಅಧಿಕಾರಿ ಇಲ್ಲಿ ವೈದ್ಯನಂತೆ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿದೆ.

ಇದಕ್ಕೆ ರೈತ ಮುಖಂಡರಾದ ಬಸನಗೌಡ ಪಾಟೀಲರು ಆಕ್ರೋಶ ವ್ಯಕ್ತಪಡಿಸಿ ಚಿಕ್ಕ ಮುನವಳ್ಳಿ, ಹಿರೇಮುನವಳ್ಳಿ, ಕರವಿನಕೊಪ್ಪ, ತೋಲಗಿ, ಬೋಗೋರ ಸೇರಿದಂತೆ ಇನ್ನಿತರ ಹಳ್ಳಿಗಳಿಗೆ ಇಟಗಿ ಪಶು ಚಿಕಿತ್ಸಾಲಯ ಒಂದೇ ಇದೆ. ಅದರಲ್ಲೂ ವೈದ್ಯರೇ ಇಲ್ಲ ಅವರ ಸಹಾಯಕ ಮಾತ್ರ ಇಲ್ಲಿ ಉಪಚರಿಸುವುದು ನಡೆಯುತ್ತಿದೆ. ಇದರ ಬಗ್ಗೆ ಹಲವಾರು ಬಾರಿ ಮೇಲಾಧಿಕಾರಿಗಳಿಗೆ ಮನವಿ ನೀಡಿದರಾದರೂ ಸ್ಪಂದನೆ ದೊರೆತಿಲ್ಲ

ನಮ್ಮ ತಾಲೂಕಾ ಆಡಳಿತಕ್ಕೆ ನಾಚಿಗೆ ಆಗಬೇಕು, ತಹಶೀಲ್ದಾರರ ಏನು ಕಣ್ಮುಚ್ಚಿ ಕುಳಿತಿದಿರಾ ಏನು? ನಾಚಿಗೆ ಆಗಬೇಕು ನಿಮ್ಮಗೆ, ಹಲವಾರು ಬಾರಿ ಮನವಿ ಸಲ್ಲಿಸಿದೆನೆ, ಹೇಳಿದೆನೆ ಏನು ಮಾಡಾತ್ತಿರಾ ನಿವು ಹೊಟ್ಟೆಗೆ ಏನು ಅನ್ನಾ ತಿಂದಿರಿ, ಏನ್ ಮಣ್ಣ ತಿಂತಿರಾ ಒಬ್ಬ ರೈತನ ಜೀವ ಕೊಡುವಂತಹ ಆಕಳುಗಳು ಎತ್ತುಗಳು ಇವತ್ತಿನ ದಿನ ಬಿದಿ, ಬಿದಿಗಳಲ್ಲಿ ಸಾಯುತ್ತಿವೆ ಏನು ಮಾಡುತ್ತೀರಿ ನಾಲಾಯಕ್ ಇದಿರಿ , ನಿಮಗೆ ತಿಳಿಯುವುದಿಲ್ಲವೇ ಒಬ್ಬ ವೈದ್ಯರನ್ನು ನೀಡಲು ಆಗವಾಲ್ತು ನಮ್ಮ ಇಟಗಿಗೆ ಇದು ಕೊನೆ ಎಚ್ಚರಿಕೆ ಬರುವ ನಾಲ್ಕು ದಿನಗಳಲ್ಲಿ ವೈದ್ಯರನ್ನು ನೀಡದಿದ್ದರೆ ಹೋರಾಟ ಮಾಡಿ ನಿಮಗೆ ಮನೆಗೆ ತಲುಪಿಸುವ ಕೆಲಸ ಮಾಡುವೆ ಎಂದು ಎಚ್ಚರಿಕೆ ನೀಡಿದ್ರು ಈ ಸಂದರ್ಭದಲ್ಲಿ ಇನ್ನಿತರ ರೈತರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ