ಇಂದು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆ ನಡೆಯಲಿದೆ, ನಾನು ಹಾಗು ಸುಧಾಕರ್ ನೇತೃತ್ವದಲ್ಲಿ ಸಭೆ ಜರುಗಿಸಲಾಗುವದು ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.
ಅವರು ಇಂದು ಸುವರ್ಣಸೌಧ ಮುಂಭಾಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ ವಿದೇಶದಲ್ಲಿ ಕೊರೊನಾ ಹೆಚ್ಚಳವಾಗಿದ್ದರಿಂದ ರಾಜ್ಯದಲ್ಲೂ ಸಹ ಮುನ್ನೆಚ್ಚರಿಕೆ ಕ್ರಮ ಜರುಗಿಸಲು ಆರೋಗ್ಯ ಸಚಿವ ಕೆ ಸುಧಾಕರ ಒಳಗೊಂಡು ಅಧಿಕಾರಿಗಳು ಮತ್ತು ಎಕ್ಸಪರ್ಟ ಜೋತೆ ಸಭೆ ಜರುಗಿಸಿ ಮುಂದಿನ ಕ್ರಮ ಕೈಕೋಳ್ಳಲಾಗುವದು ಎಂದರು.
ಜನರು ಯಾವುದೇ ಆತಂಕ ಪಡಬೇಕಿಲ್ಲ ನ್ಯೂ ಇಯರ್ ಬರುತ್ತಿದೆ ಇದಕ್ಕೆ ಬೇಕಾದ ಎಲ್ಲ ಕ್ರಮ ತೆಗದುಕೊಳ್ಳುತ್ತೇವೆ. ಅಂತಿಮವಾಗಿ ಸಿಎಂ ಜೊತೆ ಚರ್ಚೆ ಮಾಡಿ ಮಾರ್ಗಸೂಚಿ ಬಿಡುಗಡೆ ಮಾಡುತ್ತದೆ ಯಾವದೇ ಕಾರಣಕ್ಕೂ ಶಾಲಾ ಕಾಲೇಜ ಬಂದ್ ಮಾಡಲಾಗುವದಿಲ್ಲಾ ಹಾಗೂ ವ್ಯಾಪಾರ ವಹಿವಾಟಗಳಿಗೆ ತೊಂದರೆಯಾಗದಂತೆ ಕ್ರಮ ಜರುಗಿಸಲಾಗುವದು, ಜನರು ಪ್ಯಾನಿಕ ಆಗುವದು ಬೇಡ ಎಂದರು.
Laxmi News 24×7