Home / ರಾಜಕೀಯ / ಉರುಳಿದ ಗಾಲಿಗೆ ಸಿಲುಕುವವರು ಯಾರು?

ಉರುಳಿದ ಗಾಲಿಗೆ ಸಿಲುಕುವವರು ಯಾರು?

Spread the love

ಗಾಲಿ ಒಂದು ಸುತ್ತು ಉರುಳಿದೆ. ಗಾಲಿ ರಭಸ ಪಡೆದು ಎದುರಾಳಿಗಳನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ!

ನಿರೀಕ್ಷೆಯಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಿಸಿದ್ದಾರೆ. ಅವರ ಈ ಉದ್ದೇಶದಲ್ಲೇ ಎದುರಾಳಿಗಳ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬುದು ಅಡಗಿದಂತಿದೆ.

ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸಲು ಅಷ್ಟೆಲ್ಲ ದುಡಿದರೂ ಪಕ್ಷದ ಸರಕಾರದಿಂದಲೇ ತಮಗೆ ಅನ್ಯಾಯ ವಾಗಿದೆ. ಸರಕಾರದ ಏಜೆನ್ಸಿಗ ಳಿಂದ ತಮಗೆ ಸಂಕಷ್ಟ ತಪ್ಪಲಿಲ್ಲ ಎಂಬ ರೆಡ್ಡಿ ಅವರ ಆಕ್ರೋಶ ಬಿಜೆಪಿ ಹೈಕಮಾಂಡ್‌ ವಿರುದ್ಧ ತಿರುಗಿ ಬಿದ್ದಿದೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಯಡಿ ಯೂರಪ್ಪ ಅವರ ಬಗ್ಗೆ ಮೃದು ಧೋರಣೆ ತಳೆದು ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. ಇದು ಎಚ್ಚರಿಕೆ ಹೆಜ್ಜೆಯೋ, ರಣತಂತ್ರವೋ ಎಂಬ ನಿಗೂಢ ಪ್ರಶ್ನೆಯೂ ಇದೆ. ರವಿವಾರ ಸುದ್ದಿಗೋಷ್ಠಿಯಲ್ಲಿ ರೆಡ್ಡಿ ಅವರು ಯಡಿಯೂರಪ್ಪ ಅವರ ನೋವನ್ನು ತಾವು ಹಂಚಿಕೊಂಡಂತೆ ಭಾಸವಾಗಿತ್ತು.

ಅಸೆಂಬ್ಲಿ ಚುನಾವಣೆ ಹೊತ್ತಿಗೆ ರೆಡ್ಡಿ ಹೊಸ ಪಕ್ಷ ಘೋಷಿಸಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ ಆದರೂ ಅದು ರಾಜ್ಯ ರಾಜ ಕೀಯದ ಮೇಲೆ ಯಾವ ಮಟ್ಟದ ಪರಿ ಣಾಮ ಬೀರುತ್ತದೆ ಎನ್ನುವುದು ಈಗಲೇ ಹೇಳುವುದು ಕಷ್ಟ. ರೆಡ್ಡಿ ಯಾವತ್ತೂ ಜನ ಸಮುದಾಯದ ನಾಯಕರಲ್ಲ. ತೆರೆಯ ಹಿಂದೆ ನಿಂತು ರಣತಂತ್ರಗಳನ್ನು ಹೂಡಿದ್ದೇ ಹೆಚ್ಚು. ರಾಜಕಾರಣದಲ್ಲಿ ಹಣ ಬಲವನ್ನು ನೆಚ್ಚಿಕೊಂಡವರು. ಅಷ್ಟಕ್ಕೂ ಹಿಂದೆಲ್ಲ ಜನಾರ್ದನ ರೆಡ್ಡಿ ಬಂಡಾಯಕ್ಕೆ ಈಗ ಸಚಿವರಾಗಿರುವ ಬಿ. ಶ್ರೀರಾಮುಲು ಅವರ ಬಲ ಇರುತ್ತಿತ್ತು. ಆದರೆ ಈಗ ರೆಡ್ಡಿ ಏಕಾಂಗಿ. ವಾಲ್ಮೀಕಿ ಸಮುದಾಯದ ಪ್ರಭಾವಿ ಮುಖಂಡ ಶ್ರೀರಾಮುಲು ತಮ್ಮ ಸಮಾಜದ ಮತ ಗಳನ್ನು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಟ್ರಾನ್ಸ್‌ ಫ‌ರ್‌ ಮಾಡ ಬಲ್ಲರು. ಆದರೆ ರೆಡ್ಡಿ ಅವರಿಗೆ ಆ ಶಕ್ತಿ ಇದೆ ಎಂದು ಯಾರೂ ಹೇಳ ಲಾರರು.

ಹಲವು ಪ್ರಕರಣಗಳಲ್ಲಿ ಸಿಲು ಕಿರುವ ರೆಡ್ಡಿ, ಅದರಿಂದ ಮುಕ್ತ ರಾಗುವ ಹೊತ್ತಲ್ಲಿ ಇಂಥ ಹೊಸ ಪ್ರಯೋಗಕ್ಕೆ ಮುಂದಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಶ್ರೀರಾಮುಲು ಕೂಡ 2013ರಲ್ಲಿ ಬಿಜೆಪಿಯಿಂದ ಹೊರ ಬಂದು ಬಿಎಸ್‌ಆರ್‌ ಕಾಂಗ್ರೆಸ್‌ ಕಟ್ಟಿ, ಕೇವಲ 4 ಸ್ಥಾನ ಗೆದ್ದಿದ್ದರು. ಬಿಎಸ್‌ವೈ ಅವರ ಕೆಜೆಪಿ 6 ಸ್ಥಾನ ಮಾತ್ರ ಗೆದ್ದಿತ್ತು. ಯಡಿಯೂರಪ್ಪ, ರಾಮುಲು ಬಿಜೆಪಿಯ ಮತಗಳನ್ನು ಹೆಚ್ಚು ಕಬಳಿಸಿ ದ್ದರು. ಕೆಜೆಪಿ 2013ರಲ್ಲಿ ಶೇ. 9.83 ಮತಗ‌ಳನ್ನು ಪಡೆದಿತ್ತು. ಮುಂದಿನ ಚುನಾವಣೆ ಯಲ್ಲಿ ರೆಡ್ಡಿ ಅವರ ಪಕ್ಷ ಬಳ್ಳಾರಿ, ವಿಜಯ ನಗರ, ಕುಷ್ಟಗಿ ರಾಯಚೂರು, ಕೊಪ್ಪಳದ ಕೆಲವು ಕ್ಷೇತ್ರಗಳಲ್ಲಿ ಎದುರಾಳಿ ಪಕ್ಷಗಳ ಮತಗಳನ್ನು ಕಸಿಯಬಹುದು. ಅದು ಬಿಜೆಪಿ ಇಲ್ಲವೇ ಕಾಂಗ್ರೆಸ್ಸೇ ಇರಬಹುದು. ಅದು ಅಭ್ಯರ್ಥಿಗಳ ಮೇಲೆ ನಿರ್ಧರಿತ. ರೆಡ್ಡಿ ಮುಸ್ಲಿಂ ಹಾಗೂ ಕ್ರೈಸ್ತ ಮತಗಳ ಮೇಲೆ ಕಣ್ಣಿಟ್ಟಿರುವುದು ಕಾಂಗ್ರೆಸ್‌ಗೆ ಮೈನಸ್‌ ಆಗಬಹುದು. ಇವೆಲ್ಲದರ ನಡುವೆ ರೆಡ್ಡಿ ಈ ಸಾಹಸದ ಹಿಂದೆ ಯಾರಿದ್ದಾರೆ ಎನ್ನುವ ಪ್ರಶ್ನೆ ಎಲ್ಲೆಡೆ ಚರ್ಚೆಯಾಗುತ್ತಿದೆ.


Spread the love

About Laxminews 24x7

Check Also

ಅಧಿಕಾರಿಗಳ ಭರವಸೆ: ಧರಣಿ ಅಂತ್ಯ.

Spread the love ರಾಮದುರ್ಗ: ಗ್ರಾಮ ಪಂಚಾಯ್ತಿಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಹಣವನ್ನು ಸಂಬಂಧಿಸಿದ ಅಧಿಕಾರಿಗಳಿಂದ ಸರ್ಕಾರಕ್ಕೆ ಭರಿಸುವ ಭರವಸೆಯನ್ನು ತಾಲ್ಲೂಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ