ಹುಬ್ಬಳ್ಳಿ, ಅಕ್ಟೋಬರ್ 26 : ರಾಜ್ಯದ ಹಲವೆಡೆ ಈಗ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ. ವರ್ಷಗಳಿಂದ ಒಂದಿಲ್ಲೊಂದು ವಿಷಯಕ್ಕೆ ಕೋಮು ಭಾವನೆ ಕೆರಳಿಸುವ ಪ್ರಕರಣಗಳು ನಡೀಯುತ್ತಲೇ ಇವೆ. ಆದರೆ ಕುಂದಗೋಳ ತಾಲೂಕ ಗುಡನಕಟ್ಟಿ ಗ್ರಾಮದ ಮುಸ್ಲಿಂ ಕುಟುಂಬ ದೀಪಾವಳಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಸಾರೆ.
ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಒಂದಿಲ್ಲೊಂದು ವಿಷಯದಲ್ಲಿ ಕೋಮು ಸಂಘರ್ಷಗಳು ನಡೆಯುತ್ತಲೆ ಇವೆ. ಆದರೆ ದೇಶದಲ್ಲಿ ಕೆಲವು ಭಾಗದ ಜನ ಈಗಲೂ ನಾವೆಲ್ಲಾ ಒಂದೇ ಎಂಬ ಭಾವೈಕ್ಯತೆಯನ್ನು ಸಾರುತ್ತಿದ್ದಾರೆ. ಅಂತಹ ಕುಟುಂಬಗಳಲ್ಲಿ ಜಿನ್ನಾ ಸಾಬ್ ನದಾಫ್ ಮನೆತನ ಕೂಡ ಒಂದಾಗಿದೆ. ಬುಧವಾರ ಕುಟುಂಬ ಇಡೀ ಕುಟುಂಬ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ದೀಪಾವಳಿ ಪಾಡ್ಯ ದಿನವಾದ ಬುಧವಾರ ಜಿನ್ನಾ ಸಾಬ್ ನದಾಫ್ ಕುಟುಂಬ ಸಡಗರ ಸಂಭ್ರಮದಿಂದ ಲಕ್ಷ್ಮಿ ಪೂಜೆಯನ್ನು ಸರ್ವ ಭಕ್ತಿ ಭಾವದಿಂದ ನೆರವೇರಿಸಿದರು. ಮನೆಯಲ್ಲಿ ಸಗಣಿಯಿಂದ ತಯಾರಿಸಿದ ಮೂರ್ತಿಯನ್ನಿಟ್ಟು ಮಹಿಳೆಯರು ಹಿಂದೂ ಧರ್ಮದ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಭಕ್ತಿ ಭಾವ ಅರ್ಪಿಸಿದರು.
ಈ ವರ್ಷ ಹಲಾಲ್ ಮುಕ್ತ ದೀಪಾವಳಿ ಆಚರಣೆಗೆ ಶ್ರೀರಾಮ ಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳು ಕರೆ ಕೊಟ್ಟಿದ್ದವು. ಹಬ್ಬಕ್ಕೆ ಮುಸ್ಲಿಂ ವ್ಯಾಪಾರಿಗಳಿಂದ ಯಾವುದೇ ವಸ್ತುಗಳನ್ನು ಖರೀದಿಸದೇ ಕೇವಲ ಹಿಂದೂಗಳ ಬಳಿ ಖರೀದಿ ಮಾಡುವ ಕುರಿತು ಅಭಿಯಾನ ಕೂಡ ಮಾಡಿದ್ದರು. ಇದರ ನಡುವೆ ಗುಡೇನಕಟ್ಟಿ ಗ್ರಾಮದ ಈ ಮುಸ್ಲಿಂ ಕುಟುಂಬ ದೀಪಾವಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ನಾವೆಲ್ಲರೂ ಒಂದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಧರ್ಮ ಜಾತಿ ಅಂತ ಬಡಿದಾಡುತ್ತಿರುವವರಿಗೆ ಮಾದರಿಯಾಗಿದ್ದಾರೆ.