Breaking News

ಡಿವೋರ್ಸ್‌ ವಾಪಸ್:‌ ದಾಂಪತ್ಯ ಜೀವನ ಮುಂದುವರೆಸಲು ನಟ ಧನುಷ್ & ಐಶ್ವರ್ಯಾ ರಜನಿಕಾಂತ್ ನಿರ್ಧಾರ!

Spread the love

ಚೆನ್ನೈ: ಸುಮಾರು ಒಂಬತ್ತು ತಿಂಗಳ ಹಿಂದೆ ಬೇರ್ಪಟ್ಟ ಖ್ಯಾತ ತಮಿಳು ನಟ ಧನುಷ್(Dhanush) ಮತ್ತು ಐಶ್ವರ್ಯಾ ರಜನಿಕಾಂತ್(Aishwaryaa Rajinikanth) ತಮ್ಮ ವಿಚ್ಛೇದನವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಧನುಷ್ ಹಾಗೂ ಐಶ್ವರ್ಯಾ ಒಟ್ಟಿಗೆ ಇರಲು ಅವರನ್ನು ಮನವೊಲಿಸಲು ಅವರ ಕುಟುಂಬಗಳು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಧನುಷ್ ಅಥವಾ ಐಶ್ವರ್ಯ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮಗಳು ಐಶ್ವರ್ಯ ಅವರು 2004 ರಲ್ಲಿ ನಟ ಧನುಷ್ ಅವರನ್ನು ವಿವಾಹವಾದರು. ಅವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಧನುಷ್, ಐಶ್ವರ್ಯಾ ರಜಿನಿಕಾಂತ್ ತಮ್ಮ ವಿಚ್ಛೇದನವನ್ನು ರದ್ದುಗೊಳಿಸುತ್ತಾರಾ?

ನಾನೇ ವರುವೆನ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಧನುಷ್ ಮತ್ತು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ತಮ್ಮ ವಿಚ್ಛೇದನವನ್ನು ರದ್ದುಪಡಿಸಿ ಮತ್ತೆ ಒಂದಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಅವರು ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಐಶ್ವರ್ಯಾ ಮತ್ತು ಧನುಷ್ ಈ ವರ್ಷದ ಆರಂಭದಲ್ಲಿ ತಮ್ಮ ಮದುವೆಯನ್ನು ಕೊನೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದರು. ಸುಮಾರು 18 ವರ್ಷಗಳ ದಾಂಪತ್ಯ ಜೀವನ ಕಡಿದುಕೊಳ್ಳುವುದಾಗಿ ಧನುಷ್ ಮತ್ತು ಐಶ್ವರ್ಯಾ ದಂಪತಿ ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದರು. ಆದ್ರೆ, ಇದೀಗ ಅವರು ಮತ್ತೆ ಒಂದಾಗುವ ಕಾಲ ಸನಿಹದಲ್ಲಿದೆ.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ