ಬೆಳಗಾವಿ: ಸರ್ಕಾರ, ಪೊಲೀಸರು, ಸೈನಿಕರಿಂದ ಮಾತ್ರ ಹಿಂದೂ ಧರ್ಮದ ರಕ್ಷಣೆ ಸಾಧ್ಯವಿಲ್ಲ. ಹಿಂದೂ ಸಮಾಜದಲ್ಲಿ ಪರಾಕ್ರಮ ಜಾಗೃತಗೊಳಿಸಬೇಕಿದೆ ಎಂದು ವಿಹೆಚ್‌ಪಿ ಮುಖಂಡ, ಅಯೋಧ್ಯೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ ನಾಗರಕಟ್ಟೆ ಹೇಳಿದರು.
ನಗರದಲ್ಲಿ ಆಯುಧ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಪರಾಕ್ರಮ ಮುಖ್ಯವಾಗಿದೆ. ನಾವು ಪರಾಕ್ರಮ ಆರಾಧನೆ ಮಾಡಿದ್ದೇವೆ. ಕೆಲವು ವರ್ಷಗಳ ಕಾಲ ಕೆಲವರು ಶಾಂತಿ – ಶಾಂತಿ ಎಂದು ಹೇಳಿದರು. ಸದ್ಯ ದೇಶದಲ್ಲಿ ಪರಾಕ್ರಮ ಜಾಗೃತ ಆಗಬೇಕಿದೆ. ಪರಾಕ್ರಮ ಮಾಡದೇ ಇದ್ದರೇ ಶಿವಾಜಿ ಫೋಟೋ ಹಾಕಲು ಅನರ್ಹರು ಎಂದು ಅವರು ಹೇಳಿದರು.
ಪೊಲೀಸ್ ಕೇಸ್ಗೆ ನಾವು ಹೆದರಬಾರದು. ಕನ್ಹಯ್ಯ ಹತ್ಯೆ, ನೂಪುರ್ ಶರ್ಮಾ ವಿರುದ್ಧ ಧ್ವನಿ ಎತ್ತಿದಾಗ ಬಜರಂಗದಳ ಯುವಕರು ಸಮ್ಮನಾದದ್ದು ದುರ್ದೈವ. ಬಜರಂಗ ದಳದ ಯುವಕರ ರಕ್ತ ಬಿಸಿ ಇಲ್ಲವೇ?. ಬಜರಂಗದಳ ಕಾರ್ಯಕರ್ತರು ಬೀದಿಗೆ ಇಳಿದಿದ್ದರೆ ಮುಂದಿನ 50ವರ್ಷಗಳ ಕಾಲ ನೂಪುರ್ ಶರ್ಮಾ ವಿರುದ್ಧ ವಿರೋಧ ವ್ಯಕ್ತವಾಗುತ್ತಿರಲಿಲ್ಲ.