ಧಾರವಾಡ: ಬಿಜೆಪಿಗೆ (BJP) ಸಹಾಯ ಮಾಡುವ ರಾಜಕಾರಣವನ್ನು ಕಾಂಗ್ರೆಸ್ (Congress) ಮಾಡುತ್ತಿದೆ ಎಂದು ಬಿ.ಆರ್. ಅಂಬೇಡ್ಕರ್ (BR Ambedkar) ಮೊಮ್ಮಗ ಪ್ರಕಾಶ್ ಅಂಬೇಡ್ಕರ್ (Prakash Ambedkar) ಆರೋಪಿಸಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ವಿಚಾರ ಮಾಡುವ ರಾಜಕಾರಣ ಕಾಂಗ್ರೆಸ್‌ನಲ್ಲಿ ಇಲ್ಲವೇ ಇಲ್ಲ. ಕಾಂಗ್ರೆಸ್ ದಾರಿ ತಪ್ಪಿಸುವ ರಾಜಕೀಯ ಮಾಡುತ್ತಿದೆ. ಇದರ ಜೊತೆಗೆ ಬಿಜೆಪಿಗೆ ಸಹಾಯ ಮಾಡುವ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ. ಅದಕ್ಕಾಗಿ ಬಿಜೆಪಿಯ ಧೈರ್ಯ ಬೆಳೆಯುತ್ತಿದೆ, ಅದರಿಂದ ಸಂವಿಧಾನ ಬದಲಾವಣೆ ಬಗ್ಗೆ ಅವರು ಮಾತನಾಡುತಿದ್ದಾರೆ ಎಂದು ಕಿಡಿಕಾರಿದರು
1950ರಲ್ಲಿ ಆರ್‌ಎಸ್‌ಎಸ್ (RSS) ಈ ಸಂವಿಧಾನ (Constitution) ನಮ್ಮದಲ್ಲ. ನಮಗೆ ಯಾವಾಗ ಅವಕಾಶ ಸಿಗುತ್ತೋ, ಆ ದಿನ ಸಂವಿಧಾನವನ್ನು ನಾವು ಬದಲಾವಣೆ ಮಾಡುತ್ತೇವೆ ಎಂದಿತ್ತು. ಅವರ ಉದ್ದೇಶನೇ ಸಂವಿಧಾನ ಬದಲಿಸಬೇಕು ಎಂಬುದಾಗಿದೆ. ಎಲ್ಲಿವರೆಗೆ ಇವರು ದೇಶದ ಅರ್ಧ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲ್ಲ, ಲೋಕಸಭೆ ಎಲ್ಲಿವರೆಗೆ ಗೆಲ್ಲಲ್ಲ, ಅಲ್ಲಿವರೆಗೆ ಅವರು ಈ ಮಾತನ್ನು ಮತ್ತೆ ಆಡಿರಲಿಲ್ಲ. ಇದೀಗ ಬಿಜೆಪಿ ಎಲ್ಲ ರಾಜ್ಯಗಳಲ್ಲಿ ರಾಜಕೀಯ ಸಂಘಟನೆ ಅಳಿಸಲು ಮುಂದಾಗಿದೆ. ತಮ್ಮ ಅಧಿಕಾರಕ್ಕಾಗಿ ಈ ರೀತಿ ಮಾಡುತ್ತಿದೆ. ಸಂವಿಧಾನ ಬದಲಾವಣೆಯೇ ಆರ್‌ಎಸ್‌ಎಸ್, ಬಿಜೆಪಿಯ ಅಜೆಂಡಾ ಎಂದರು.
ಪರಿವಾರದ ಸಂರಕ್ಷಣೆ, ಸಾಮಾಜಿಕ ಸಂರಕ್ಷಣೆ ಅಲ್ಲ, ಅದಕ್ಕಾಗಿ ಜನರು ಶಿಕ್ಷಣ ಕೊಡಿಸುವುದು ಮಾತ್ರ ಅವಶ್ಯಕತೆ ಇಲ್ಲ, ಮೀಸಲಾತಿನೇ ಇರದೇ ಇದ್ರೆ ನಿಮ್ಮ ಮಕ್ಕಳು ಶಿಕ್ಷಣ ಪಡೆಯಲು ಆಗಲ್ಲ, ನೌಕರಿ ಕೂಡಾ ಸಿಗಲ್ಲ, ಯಾರು ತಮ್ಮ ಪರಿವಾರದ ವಿಚಾರ ಮಾಡುತ್ತಿದ್ದಾರೆ, ಅವರಿಗೆ ಸಾಮಾಜಿಕ ಜವಾಬ್ದಾರಿ ಕೂಡಾ ಇದೆ ಎಂದು ಅಭಿಪ್ರಾಯ ಪಟ್ಟರು.