ಮಸ್ಕಿ: ಕಾರೊಂದು ನಾಲೆಗೆ ಉರುಳಿ ಬಿದ್ದು ಇಬ್ಬರು ಮೃತಪಟ್ಟು,ಒಬ್ಬ ಪಾರಾದ ಘಟನೆ ಸಮೀಪದ ತುಂಗಭದ್ರಾ ಎಡದಂಡೆಯಲ್ಲಿ ಮಂಗಳವಾರ ನಡೆದಿದೆ.
ಕಾರಿನಲ್ಲಿದ್ದವರು ಅಮರೇಶ್ವರ ಹತ್ತಿರದ ಗೋನವಾಟ್ಲ ಗ್ರಾಮದಿಂದ ಸಿಂಧನೂರು ಕಡೆ ತೆರಳುತ್ತಿದ್ದರು.
ಘಟನೆಯಲ್ಲಿ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮೃತರು ಆಂಧ್ರ ಮೂಲದವರಾಗಿದ್ದು, ವಿವರ ತಿಳಿದು ಬಂದಿಲ್ಲ. ಆದರೆ, ಕಾರಿನ ದಾಖಲೆಯಲ್ಲಿ ಹೈದರಬಾದ್ ನ ನೆಕ್ಕಂಟಿ ಶ್ರೀನಿವಾಸ ಎಂದು ತೋರಿಸುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕಾರು ಹಾಗೂ ದೇಹಗಳನ್ನು ಹೊರಗೆ ತೆಗೆದು ತನಿಖೆ ಮುಂದುವರಿಸಿದ್ದಾರೆ.
Laxmi News 24×7