ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆಗಳಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು.
ಬೆಳಗಾವಿ ನಗರದಲ್ಲಿ ಭಾನುವಾರ ಸಾಧಾರಣ ಮಳೆ ಸುರಿದಿತ್ತು. ಸೋಮವಾರ ಬೆಳಿಗ್ಗೆಯಿಂದ ತುಸು ಬಿರುಸು ಪಡೆಯಿತು. ತಾಲ್ಲೂಕಿನಲ್ಲಿ ಕೂಡ ಮಧ್ಯಾಹ್ನ 12ರಿಂದ ಧಾರಾಕಾರವಾಗಿ ಸುರಿಯುತ್ತಿದೆ.
ಇದರಿಂದ ಶಾಲೆ, ಕಾಲೇಜಿಗೆ, ಕಚೇರಿ, ಹೊಲಗಳಿಗೆ ತೆರಳುವವರೆಲ್ಲ ರೇನ್ ಕೋರ್ಟ್, ಕೊಡೆಗಳ ಆಶ್ರಯ ಪಡೆದರು.
ಇನ್ನೊಂದೆಡೆ ಮಲಪ್ರಭಾ, ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಕೂಡ ಉತ್ತಮ ಮಳೆಯಾದ ಕಾರಣ ಒಳಹರಿವು ಹೆಚ್ಚಾಗಿದೆ.
ಜಿಲ್ಲೆಯ ಚಿಕ್ಕೋಡಿ, ಬೈಲಹೊಂಗಲ, ಖಾನಾಪುರ, ಅಥಣಿ, ರಾಯಬಾಗ, ಯರಗಟ್ಟಿ, ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲೂ ಮಳೆಯಾಗಿದೆ.
Laxmi News 24×7