ತುಮಕೂರು, ಏ.28- ಕುಡಿಯುವ ನೀರಿನ ಯೋಜನೆ ಜಾರಿಗೆ ತರಲು ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿದ್ದು, ಸಮಿತಿಯಲ್ಲಿ ಇಲ್ಲಾ ಎಂದು ಸಬೂಬು ಹೇಳಿ ಮನ ಬಂದಂತೆ ಮಾತನಾಡಿದರೆ ಸಹಿಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಇಂದು ಬೆಳಗ್ಗೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಗ್ರಾಮಿಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲ್ಲೋಕುಗಳು ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ಶಾಸಕರಾದ ಸತ್ಯನಾರಾಯಣ,ಬಿ.ಸಿ.ನಾಗೇಶ್, ಜ್ಯೋತಿ ಗಣೇಶ್, ಮಸಾಲೆ ಜಯರಾಂ ಸೇರಿದಂತೆ ಇತರರು ಆರೋಪಿಸಿದರು. ಅಗ ಅಧಿಕಾರಿಗಳಿಂದ ಮಾಹಿತಿ ಕೇಳಿದಾಗ ಕೆಲವು ಅಧಿಕಾರಿಗಳು ಸಬೂಬು ಹೇಳಲು ಮುಂದಾದಾಗ ಅಧಿಕಾರಿಗಳು ಬೇಜಾವಬ್ದಾರಿ ಉತ್ತರಕ್ಕೆ ಸಚಿವರು ಕೆಂಡಾಮಂಡಲರಾದರು.
ಗುಬ್ಬಿ ತಾಲೂಕಿನ ಇಲಾಖೆಯ ಎ ಇಇ ಅವರಿಗೆ ತರಾಟೆಗೆ ತೆಗೆದುಕೊಂಡರು ನೀವು ಶಾಸಕರ ಜತೆ ಕುಡಿಯುವ ನೀರಿನ ಯೋಜನೆಗೆ ಕ್ರೀಯಾ ಯೋಜನೆ ವರದಿ ತಯಾರಿಸಿ ಎಂದು ಹೇಳಿದರು. ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಆಗಿದ್ದಾರೆ ಯಾಕೆ ವರದಿ ನೀಡಲಿಲ್ಲಾ ಎಂದರು.
ಕೂಡಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣಿ ಅವರಿಗೆ ಬರಗಾಲಕ್ಕೆ ತುತ್ತಾಗಿರುವ ತಾಲ್ಲೋಕು ತಕ್ಷಣವೇ 1.5 ಕೋಟಿ ಮೊತ್ತದ ಕ್ರೀಯಾ ಯೋಜನೆ ರೂಪಿಸಿ ಕೊಂಡು ಕಳುಹಿಸಿ ಅನುಮತಿ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಏಳು ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದಾಗ ನಾಗೇಶ್ ಅವರು ತಿಪಟೂರು ತಾಲ್ಲೂಕಿನ ಕೈ ಬಿಟ್ಟು ಇರುವುದು ಅಸಮಾಧಾನ ವ್ಯಕ್ತಪಡಿಸಿದರು.ಅಗ ಸಚಿವರು ನಂಜುಂಡಪ್ಪ ವರದಿಯಲ್ಲಿ ನಿಮಗೆ ಅನ್ಯಾಯವಾಗಿದೆ ಅದರು ನಾನು ನಿಮ್ಮ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಹಾಗೂ ನೀವು ಕ್ರೀಯಾ ಯೋಜನೆ ವರದಿ ತಯಾರಿಸಿ ಕಳುಹಿಸಿ ಅನುಮತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಕೋವಿಡ್ -19 ಇರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಯೋಜನೆ ಗಳನ್ನು ವಿಳಂಬ ಮಾಡಲು ಏನು ಕಾರಣ ಭಾರತ ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ಯಾವತ್ತು ನರೇಗಾ ಯೋಜನೆ, ಸೇರಿದಂತೆ ಕೃಷಿ ಚಟುವಟಿಕೆ ಗಳಿಗೆ ಯಾವುದೇ ಒತ್ತು ನೀಡಿಲ್ಲಾ ಎಂದು ಅಧಿಕಾರಿಗಳು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನರೇಗಾ ಯೋಜನೆಯಡಿ ನೆಡೆಯುವ ಕಾಮಗಾರಿಗಳು ಕೆಲವು ತಾಲ್ಲೂಕುಗಳಲ್ಲಿ ಸಂಪೂರ್ಣ ವಿಳಂಬ ವಾಗಿದೆ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್ ಸೇರಿದಂತೆ ವಿಳಂಬ ವಾಗಿದೆ ಎಂದು ಅಸಮದಾನ ವ್ಯಕ್ತಪಡಿಸಿದರು.
ಸಂಸದ ಡಿ.ಕೆ.ಸುರೇಶ್ ಮಧ್ಯ ಪ್ರವೇಶ ಮಾಡಿ ಸಚಿವರೇ ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾರತ ಲಾಕ್ ಡೌನ್ ಘೋಷಣೆ ಮಾಡಿ ಮನೆಯಿಂದ ಯಾರು ಹೊರಗಡೆ ಬರ ಬೇಡಿ ಎಂದು ಹೇಳಿದಾಗ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಾರೆ. ಮುಖ್ಯಮಂತ್ರಿಗಳು ಪದೇ ಪದೇ ಹೇಳಿಕೆ ನೀಡಿದ್ದಾರೆ ಹೇಗೆ ಕೆಲಸ ಮಾಡಲು ಆಗುತ್ತದೆ ಜನನರು ಮನೆಯಿಂದ ಹೊರಗಡೆ ಬಂದರೆ ಪೊಲಿಸರು ಹೊಡೆಯುತ್ತಾರೆ ಹೇಗೆ ಸಾಧ್ಯ ಎಂದು ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಲತಾ ರವೀಶ್, ಉಪಾಧ್ಯಕ್ಷರಾದ ಶಾರದಾ ನರಸಿಂಹ ಮೂರ್ತಿ, ಜಿಪಂ ಸಿಇಒ ಶುಭ ಕಲ್ಯಾಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.