ಶ್ರೀಶೈಲ್ ಜಗದ್ಗುರಗಳ ದ್ವಾದಶ ಪೀಠಾರೋಹಣ ಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ಅಂಗವಾಗಿ ಯಡೂರದಿಂದ ಶ್ರಿಶೈಲ್’ದವರೆಗೆ ಸುಮಾರು 560 ಕಿ.ಮೀದವರೆಗೆ ಸಸಿ ನೆಡುವ ಕಾರ್ಯಕ್ರಮಕ್ಕೆ ಸಚಿವ ಉಮೇಶ ಕತ್ತಿ ಚಾಲನೆಯನ್ನು ನೀಡಿದರು…
ಚಿಕ್ಕೋಡಿ ತಾಲೂಕಿನ ಯಡೂರಿನ ವೀರಭದ್ರೇಶ್ವರ ದೇವಸ್ಥಾನದ ಕಾಡಸಿದ್ದೇಶ್ವರ ಕಲ್ಯಾಣಭವನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಶ್ರೀಶೈಲ ಜದ್ಗುರುಗಳು ಹಾಗೂ ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಸಚಿವ ಉಮೇಶ ಕತ್ತಿ ಚಾಲನೆಯನ್ನು ನೀಡಿದರು..ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ಉಮೇಶ ಕತ್ತಿ ನಾನುವಶ್ರಿಶೈಲ್ ಮಲ್ಲಿಕಾರ್ಜುನ ಭಕ್ತನಾಗಿದ್ದೇನೆ..
ಕರ್ನಾಟಕ ಸರ್ಕಾರದಿಂದ ಶ್ರೀಶೈಲನಲ್ಲಿ ಯಾತ್ರಿನಿವಾಸ ನಿರ್ಮಾಣ ಮಾಡಲು 85 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ..ಶ್ರೀಶೈಲ ಜದ್ಗುರುಗಳು ಯಡೂರದಿಂದ ಶ್ರೀಶೈಲದವರೆಗೆ ಗಿಡಗಳನ್ನು ನೆಡಲು ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದರು..ಈ ಕಾರ್ಯಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಸಚಿವ ಉಮೇಶ ಕತ್ತಿ ಹೇಳಿದರು..
Laxmi News 24×7