Home / ಬಳ್ಳಾರಿ / ಬಳ್ಳಾರಿ ಪಾಲಿಕೆಯಲ್ಲಿ ಹೈಡ್ರಾಮಾ: ಕಮಿಷನರ್​ಗೆ ಕನ್ನಡದಲ್ಲೇ ಮಾತಾಡಿ ಮೇಡಂ ಎಂದು ಪಾಲಿಕೆ ಸದಸ್ಯರಿಂದ ತರಾಟೆ

ಬಳ್ಳಾರಿ ಪಾಲಿಕೆಯಲ್ಲಿ ಹೈಡ್ರಾಮಾ: ಕಮಿಷನರ್​ಗೆ ಕನ್ನಡದಲ್ಲೇ ಮಾತಾಡಿ ಮೇಡಂ ಎಂದು ಪಾಲಿಕೆ ಸದಸ್ಯರಿಂದ ತರಾಟೆ

Spread the love

ಬಳ್ಳಾರಿ: ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಆಯೋಜಿಸಲಾಗಿದ್ದ ಸಭೆಯಲ್ಲಿ ತಡವಾಗಿ ಬಂದು ಕನ್ನಡ ಬಳಸದ ಪಾಲಿಕೆ ಆಯಕ್ತೆಯನ್ನು ಸದಸ್ಯರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಸಭೆಗೆ ಮೇಯರ್ ಮೊದಲು ಬಂದು ಆಯುಕ್ತರಿಗಾಗಿ ಕಾದರೂ ಅವರ ಪತ್ತೆಯೇ ಇರಲಿಲ್ಲ, ಇದರಿಂದ ಅಸಮಾಧಾನಗೊಂಡ ಸದಸ್ಯರು ತಡವಾಗಿ ಬಂದ ಪ್ರೀತಿ ಗೆಹ್ಲೋಟ್​ ಅವರ ವಿರುದ್ಧ ಅಸಮಾಧಾನ ಹೊರಹಾಕಿದರು.

 

ಇದೇ ವೇಳೆ ಕಾದು ಸುಸ್ತಾದ ಮೇಯರ್ ರಾಜೇಶ್ವರಿ ಅವರು ಕೆಲಕಾಲ ಹೊರಹೋಗಿದ್ದರು, ಈ ವೇಳೆಯೇ ಬಂದ ಆಯುಕ್ತೆ ಸಭೆಯನ್ನು ಪ್ರಾರಂಭಿಸಿದ್ದರು. ಇದರಿಂದ ಆಕ್ರೋಶಗೊಂಡ ಸದಸ್ಯರಿಂದ ಗದ್ದಲ ಏರ್ಪಟ್ಟು ಹೈ ಡ್ರಾಮಾವೇ ನಡೆಯಿತು.

ಆಯುಕ್ತರ ನಡೆಯನ್ನು ಖಂಡಿಸಿ ಕೆಲಕಾಲ ಸಭೆಯಲ್ಲೇ ಪ್ರತಿಭಟನೆ ನಡೆಸಿದರು. ನೀವು ಸರ್ವಾಧಿಕಾರಿಯಂತೆ ವರ್ತನೆ ಮಾಡ್ತೀರಾ, ಯಾವಾಗ್ಲೂ ಮೀಟಿಂಗ್ ಮೀಟಿಂಗ್ ಅಂತಿರಾ, ಜನರ ಕಷ್ಟ ಕೇಳಲ್ಲ ಎಂದು ಮೇಯರ್, ಉಪಮೇಯರ್ ಸೇರಿದಂತೆ ಪಾಲಿಕೆ ಸದಸ್ಯ ಕಮಿಷನರ್​ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ