Breaking News

ಕುಡಿದು ಮೈಮರೆತ್ರಾ ಚಹಾಲ್-ನೆಹ್ರಾ..?: ಮತ್ತೆ ಮ್ಯಾಚ್ ಫಿಕ್ಸಿಂಗ್ ಅನುಮಾನ

Spread the love

ರಾಜಸ್ಥಾನ್ ರಾಯಲ್ಸ್ ಫೈನಲ್‌ನಲ್ಲಿ ಸೋತಿರಬಹುದು. ಆದರೆ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಯುಜ್ವೇಂದ್ರ ಚಹಾಲ್ ಪರ್ಪಲ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದರು.ಕಳೆದ ತಿಂಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಗುಜರಾತ್ ಟೈಟಾನ್ಸ್ ತನ್ನ ಚೊಚ್ಚಲ ಸೀಸನ್​ನಲ್ಲೇ ಐಪಿಎಲ್​ ಚಾಂಪಿಯನ್ ಆಗಿತ್ತು.

ಈ ಗೆಲುವಿನ ನಂತರ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಗುಜರಾತ್ ಟೈಟಾನ್ಸ್​ ತಂಡದ ಆಟಗಾರರೊಂದಿಗೆ ರಾಜಸ್ಥಾನ್ ರಾಯಲ್ಸ್ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ಕಾಣಿಸಿಕೊಂಡಿದ್ದರು. ಅದರಲ್ಲೂ ಪಾರ್ಟಿಯ ಬಳಿಕ ಗುಜರಾತ್ ತಂಡ ಕೋಚ್ ಆಶಿಶ್ ನೆಹ್ರಾ ಹಾಗೂ ಚಹಾಲ್ ಜೊತೆಯಾಗಿ ಕಾಣಿಸಿಕೊಂಡ ವಿಡಿಯೋವೊಂದು ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ, ಯುಜ್ವೇಂದ್ರ ಚಹಾಲ್ ಮತ್ತು ಆಶಿಶ್ ನೆಹ್ರಾ ಸಂಭಾಷಣೆಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಅಲ್ಲದೆ ಇಬ್ಬರೂ ಅಮಲಿನಲ್ಲಿರುವಂತೆ ಭಾಸವಾಗುತ್ತೆ. ವೀಡಿಯೊದಲ್ಲಿ ನೆಹ್ರಾ ಚಹಾಲ್‌ಗೆ ತನ್ನೊಂದಿಗೆ ಬಸ್​ನಲ್ಲಿ ಬರುವಂತೆ ಒತ್ತಾಯಿಸುವುದನ್ನು ಕಾಣಬಹುದು. ಆದರೆ ರಾಜಸ್ಥಾನ ರಾಯಲ್ಸ್ ಲೆಗ್ಗಿ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ಕಾರಿನ್ಲಲಿ ಹೋಗಲು ಮುಂದಾಗಿದ್ದಾರೆ.

‘ಅಬೆ ತು ಇಧಾರ್ ಬಸ್ ಮೇ ಆ ( ನೀ ನನ್ನೊಂದಿಗೆ ಬಸ್​ನಲ್ಲಿ ಬಾ)’ ಎಂದು ನೆಹ್ರಾ ಚಹಾಲ್​ಗೆ ಹೇಳಿದಾಗ, ‘ಬಸ್ ಮೇ ನಹಿ ಜಾನಾ ಮುಝೆ (ನಾನು ಬಸ್‌ನಲ್ಲಿ ಬರಲ್ಲ)’ ಎಂದು ಉತ್ತರಿಸಿದರು. ಅಲ್ಲದೆ ‘ಬಿವಿ ಕೊ ಕಹಾ ಚೋಡ್​ದು ಮೈನ್ (ನಾನು ನನ್ನ ಹೆಂಡತಿಯನ್ನು ಎಲ್ಲಿ ಬಿಡಲಿಪಾ)’, ನೆಹ್ರಾ ಅವರನ್ನು ಕೇಳಿದರು. ಇದೇ ವೇಳೆ ‘ಬಿವಿ ಭಿ ಆಯೇಗಿ ಹುಮಾರೆ ಸಾಥ್ ಬಸ್ ಮೇ (ಅವಳು ಸಹ ನಮ್ಮೊಂದಿಗೆ ಬಸ್‌ನಲ್ಲಿ ಬರುತ್ತಾಳೆ)’ ಎಂದು ನೆಹ್ರಾ ಉತ್ತರಿಸಿದರು.

ಇದೀಗ ಈ ಸಂಭಾಷಣೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಬ್ಬರೂ ಕುಡಿದು ಮೈಮರೆತಿದ್ದಾರೆ. ಎಲ್ಲರೂ ಸೋತ ದುಃಖದಲ್ಲಿ ಮನೆ ಸೇರಿದ್ದರೆ ಚಹಾಲ್ ಗುಜರಾತ್ ಟೈಟಾನ್ಸ್ ಜೊತೆ ಕುಡಿದು ಪಾರ್ಟಿ ಮಾಡಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ