Breaking News

ಸೂ.. ಮಕ್ಕಳಾ ಅಂತ ಕಾಂಗ್ರೆಸ್ ಪಕ್ಷದವರನ್ನ ನಿಂದಿಸಿದ ಬಿಜೆಪಿ ಸಂಸದ

Spread the love

ಚಿಕ್ಕೋಡಿ(ಬೆಳಗಾವಿ): ಸೂ.. ಮಕ್ಕಳಾ ಎಂದು ಕಾಂಗ್ರೆಸ್ ಪಕ್ಷದವರನ್ನು ಅವಾಚ್ಯ ಶಬ್ದಗಳಿಂದ ವಿಜಯಪುರದ ಬಿಜೆಪಿ ಸಂಸದ ರಮೇಶ್ ಜಿಗಜಿಗಣಿ ನಿಂದಿಸಿರುವ ಘಟನೆ ನಡೆದಿದೆ.

ಚಿಕ್ಕೋಡಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವನ ಸಂಸದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರ್‌ಎಸ್‍ಎಸ್ ಸಂಘಟನೆಯಿಂದ ಜಿಗಜಿಣಗಿ ಅವರು ದೂರ ಇದ್ದೀರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ನಿಂದನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಜನತಾ ಪರಿವಾರದ ಮುಖಂಡರ ಸಹವಾಸದಿಂದ ಬೆಳೆದಿದ್ದೇವೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನಿಧನದ ನಂತರ ಕಾಂಗ್ರೆಸ್ ಪಕ್ಷಕ್ಕೆ ಬಾ ಎಂದು ಕರೆದಿದ್ದರು ಎಂದರು

ಕಾಂಗ್ರೆಸ್‍ನವರು ಸೂ.. ಮಕ್ಕಳಾ ಮನೆ ಹಾಳ ಮಾಡಿದ್ದೀರೆ. ಬಾಬಾಸಾಹೇಬ್‌ ಅಂಬೇಡ್ಕರ್ ಅವರನ್ನು ಕೊಲೆ ಮಾಡಿದ್ದಾರೆ. ಅವರ ಮರಣದ ನಂತರ ದೆಹಲಿಯಲ್ಲಿ ಮಣ್ಣು ಮಾಡಲು ಸ್ಥಳವನ್ನು ನೀಡಲಿಲ್ಲ. ನಿಮ್ಮಂಥ ಮನೆಹಾಳ ಪಕ್ಷ ಸೇರುವುದಿಲ್ಲ. ಏನೇ ಆಗಲಿ ಎಂದು ವಿರೋಧದ ನಡುವೆಯೂ ಬಿಜೆಪಿ ಸೇರಿದ್ದೇನೆ. ಜನತಾದಳದವನಾಗಿದ್ದರೂ ಸಂಘ ಪರಿವಾರ ಹಾಗೂ ಬಿಜೆಪಿಯ ಬಗ್ಗೆ ಗೌರವ ಇದೆ ಎಂದು ತಿಳಿಸಿದರು


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ