Breaking News

ಈಗ ಹೆಲ್ಮೆಟ್​​ ಜತೆಗೆ ಐಎಸ್​​ಐ ಮಾರ್ಕ್​​ ಹೊಂದಿರುವುದು ಕೂಡ ಕಡ್ಡಾಯ: ಇಲ್ಲದಿದ್ದರೆ ಕಟ್ಟಬೇಕಾಗುತ್ತೆ 2000 ರೂ.ದಂಡ!

Spread the love

ನವದೆಹಲಿ: ದ್ವಿಚಕ್ರವಾಹನ ಸವಾರರು ಹೆಲ್ಮೆಟ್​​ ಧರಿಸದಿದ್ದರೆ ದಂಡ ಪಾವತಿಸಬೇಕಿತ್ತು. ಈಗ ಇನ್ನೊಂದು ಹೊಸ ನಿಯಮ ಜಾರಿಗೆ ಬಂದಿದ್ದು, ಸರ್ಕಾರ ಹೇಳಿರುವ ಮಾರ್ಕ್​​ ಇರುವ ಹೆಲ್ಮೆಟ್ಟನ್ನೇ ಧರಿಸಬೇಕೆಂಬ ನಿಯಮವನ್ನು ಜಾರಿಗೆ ತಂದಿದೆ.

ಈವೆರಗೂ ಹೆಲ್ಮೆಟ್​ ಧರಿಸದವರಿಗೆ ದಂಡ ವಿಧಿಸಲಾಗುತ್ತಿತ್ತು.

ಈಗ ಹೆಲ್ಮೆಟ್​ ಧರಿಸಿದ್ದರೂ ದಂಡ ಪಾವತಿಸಬೇಕಾಗುತ್ತದೆ. ಅರೆ… ಏನಿದು ಹೆಲ್ಮೆಟ್​ ಧರಿಸದರೂ ಯಾಕೆ ದಂಡ ಪಾವತಿಸಬೇಕು ಎನ್ನುವವರಿಗೆ ಇಲ್ಲಿದೆ ಉತ್ತರ.

ಹೌದು…. ಮೋಟಾರ್​ ವೆಹಿಕಲ್​ ಕಾಯಿದೆ ಅನ್ವಯ ದ್ವಿ-ಚಕ್ರ ವಾಹನ ಚಲಾಯಿಸುವವರು ಕಡ್ಡಾಯವಾಗಿ ಹೆಲ್ಮೆಟ್​​ ಧರಿಸುವುದು ಹಿಂದಿನ ನಿಯಮವಾಗಿತ್ತು. ಈಗ ಹೆಲ್ಮೆಟ್​​ ಜತೆಗೆ ಐಎಸ್​​ಐ ಮಾರ್ಕ್​​ ಹೊಂದಿರುವುದು ಕೂಡ ಕಡ್ಡಾಯವಾಗಿದೆ.

ಒಂದು ವೇಳೆ ಐಎಸ್​​ಐ ಮಾರ್ಕ್​ ಇಲ್ಲದಿದ್ದರೆ 1000 ರೂ. ದಂಡ ಪಾವತಿಸಬೇಕಾಗುತ್ತದೆ. ಇನ್ನು ಈ ಹೆಲ್ಮೆಟ್​​ ಮಾನದಂಡಗಳಿಗನುಗುಣವಾಗಿ ಪೂರ್ತಿ ತಲೆಯನ್ನು ಮುಚ್ಚಿರಬೇಕು. ಇದಕ್ಕೂ 1000 ರೂ. ದಂಡ ಎರಡು ಸೇರಿ ಒಟ್ಟು 2 ಸಾವಿರ ರೂ. ದಂಡ ವಿಧಿಸಬೇಕಾಗುತ್ತದೆ.


Spread the love

About Laxminews 24x7

Check Also

ಶಾಸಕ ವೀರೇಂದ್ರ ಬಂಧನ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯ ಆದೇಶ ಕಾಯ್ದಿರಿಸಿದ ಹೈಕೋರ್ಟ್

Spread the loveಬೆಂಗಳೂರು: ಆನ್​ಲೈನ್ ಮತ್ತು ಆಫ್​ಲೈನ್ ಅಕ್ರಮ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಚಿತ್ರದುರ್ಗದ ಶಾಸಕ ಕೆ.ಸಿ.ವೀರೇಂದ್ರ ಅವರನ್ನು ಕಾನೂನುಬಾಹಿರವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ