ಕಿರುತೆರೆಯ ಸೂಪರ್ ಹಿಟ್ `ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ನಟ ಸದಾನಂದ ಹಸೆಮಣೆ ಏರಿದ್ದಾರೆ. ಇದೀಗನಟ ಸದಾನಂದ ಮದುವೆಯ ಫೋಟೋಗಳ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಸುಲ್ತಾನ್‌ಪುರ ಗ್ರಾಮದ ಪ್ರತಿಭೆ ಸದಾನಂದ ದುರ್ಗಪ್ಪ ಕಾಳೆ ಅವರು ಖಾಸಗಿ ಚಾನೆಲ್‌ನ್ನ ಕಾಮಿಡಿ ಕಿಲಾಡಿಗಳು ಶೋ ಮೂಲಕ ಗುರುತಿಸಿಕೊಂಡಿದ್ದರು.
ತಮ್ಮ ಅಮೋಘ ನಟನೆಯಿಂದ ಗಮನ ಸೆಳೆದಿದ್ದ ನಟ ಸದಾನಂದ ಇಂದು ಸರಳವಾಗಿ ವಿವಾಹವಾಗಿದ್ದಾರೆ. ಸಾಕಷ್ಟು ಸೀರಿಯಲ್ ಮತ್ತು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸದಾನಂದ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ನೆಚ್ಚಿನ ನಟನ ಹೊಸ ಬಾಳಿಗೆ ಸ್ನೇಹಿತರು ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ