26 ವರ್ಷದ ಮಹಿಳೆಯೊಬ್ಬರು ಸುಮಾರು 10 ದಿನಗಳ ಕಾಲ ತನ್ನ ತಾಯಿಯ ಕೊಳೆತ ಶವದೊಂದಿಗೆ ಕಳೆದ ಘಟನೆ ಲಕ್ನೋದಲ್ಲಿ ನಡೆದಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ ಆಕೆಯ ತಾಯಿ ಮೇ ಹತ್ತರಂದು ನಿಧನರಾದರು, ಆದರೆ ಆಕೆ ತಾಯಿಯ ಸಾವಿನ ಬಗ್ಗೆ ತನ್ನ ಸಂಬಂಧಿಕರು ಅಥವಾ ಸ್ನೇಹಿತರಿಗೆ ತಿಳಿಸಲಿಲ್ಲ.
ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ತಿಳಿಸಿದ್ದರಿಂದ, ಪೊಲೀಸರು ಬಾಗಿಲು ಒಡೆದು ನೋಡಿದಾಗ ಕೊಳೆತ ಶವ ಪತ್ತೆಯಾಯಿತು.
ಎಚ್‌ಎಎಲ್‌ನ ನಿವೃತ್ತ ಎಂಜಿನಿಯರ್ ಆಗಿದ್ದ ಸುನಿತಾ ದೀಕ್ಷಿತ್ 10 ದಿನಗಳ ಹಿಂದೆ ಮೃತಪಟ್ಟಿದ್ದು, ಆಕೆಯ ಮಗಳು ಅಂಕಿತಾ ದೀಕ್ಷಿತ್ (26) ಸುನೀತಾ ಅವರ ಕೋಣೆಯ ಪಕ್ಕದ ಕೋಣೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ.
ಘೋರ ವಾಸನೆಯ ಹೊರತಾಗಿಯೂ, ಅಂಕಿತಾ ತನ್ನ ತಾಯಿಯ ಸಾವಿನ ಬಗ್ಗೆ ಸಂಬಂಧಿಕರಿಗೆ ಅಥವಾ ನೆರೆಹೊರೆಯವರಿಗೆ ತಿಳಿಸಲಿಲ್ಲ ಅಥವಾ ಸಹಾಯವನ್ನು ಕೇಳಲಿಲ್ಲ.
Laxmi News 24×7