ಕೊಪ್ಪಳ: ಕಾಮಗಾರಿಗೆ ಅಗೆದಿದ್ದ ಗುಂಡಿಯನ್ನು ಒಂದು ವರ್ಷವಾದರೂ ಮುಚ್ಚದೇ ಬಾಲಕಿಯೊಬ್ಬಳು ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಇಲ್ಲಿನ ಹೊಸಪೇಟೆ ರಸ್ತೆಯಲ್ಲಿರುವ ಕೆಎಸ್ ಆಸ್ಪತ್ರೆಯ ಬಳಿ ನಡೆದಿದೆ.
15 ವರ್ಷದ ಭೂಮಿಕಾ ಪ್ರಾಣ ಕಳೆದುಕೊಂಡ ಬಾಲಕಿ. ಕಾಮಗಾರಿಗಾಗಿ ಅಗೆದಿದ್ದ ಗುಂಡಿಯನ್ನು ಒಂದು ವರ್ಷವಾದರೂ ಮುಚ್ಚದೇ, ಈಚೆಗಷ್ಟೇ ಸುರಿದ ಭಾರೀ ಮಳೆಯಿಂದ ನೀರು ತುಂಬಿಕೊಂಡಿತ್ತು. ಇದೇ ಗುಂಡಿಗೆ ಆಯತಪ್ಪಿ ಬಿದ್ದ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ.
ಬಾಲಕಿಯ ತಂದೆ ಶಂಭುಲಿಂಗಯ್ಯ ಪಾನ್‌ಶಾಪ್ ನಡೆಸುತ್ತಿದ್ದರು. ಇದ್ದ ಒಬ್ಬಳೇ ಮಗಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನಿನ್ನೆ ಪಾನ್‌ಶಾಪ್‌ಗೆ ಬಂದು ವಾಪಸ್ ಮನೆಗೆ ಹೋಗುತ್ತಿದ್ದ ಬಾಲಕಿ ಆಯತಪ್ಪಿ ಗುಂಡಿಯೊಳಗೆ ಬಿದ್ದಿದ್ದಾಳೆ. ಸಂಜೆಯಾದರೂ ಮಗಳು ಮನೆಗೆ ಬರಲಿಲ್ಲವೆಂದು ಕುಟುಂಬದವರು ಇಡೀ ಊರೆಲ್ಲಾ ಹುಡುಕಾಡಿದ್ದಾರೆ. ಆದರೂ ಮಗಳು ಸಿಕ್ಕಿರಲಿಲ್ಲ.