ಬೆಳಗಾವಿ: ಎನ್‍ಸಿಪಿ ಕಾರ್ಯಕರ್ತರು ಕಿತ್ತೂರು ರಾಣಿ ಚೆನ್ನಮ್ಮಗೆ ಅಪಮಾನ ಮಾಡಿದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಇದೀಗ ಈ ಘಟನೆ ಚೆನ್ನಮ್ಮ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿ ಪ್ರವಾಸದಲ್ಲಿರುವ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಚೆನ್ನಮ್ಮ ವೃತ್ತದಲ್ಲಿ ಅದ್ಧೂರಿ ಸ್ವಾಗತ ದೊರೆಯಿತು. ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ್ದ ಎನ್‍ಸಿಪಿ ನಾಯಕ ಶರದ್ ಪವಾರ್‌ಗೆ ಬೃಹದಾಕಾರದ ಹೂವಿನ ಹಾರ ತಂದು ಪಟಾಕಿ, ಸಿಡಿಮದ್ದು ಸಿಡಿಸಿ ಅದ್ಧೂರಿ ಸ್ವಾಗತ ಕೊರಲಾಯಿತು
ಶರದ್ ಪವಾರ್ ಎದುರು ಬೃಹದಾಕಾರದ ಹಾರ ನಿಲ್ಲಿಸಿ ಫೋಟೋಗೆ ಪೋಸ್ ನೀಡಿದ್ದ ಅವರು ತೆರಳಿದ ಬಳಿಕ ಅದೇ ಬೃಹದಾಕಾರದ ಹಾರವನ್ನು ಚೆನ್ನಮ್ಮ ಮೂರ್ತಿ ಎದುರು ತಂದು ಫೋಟೋಗೆ ಕಾರ್ಯಕರ್ತರು ಫೋಸ್ ಕೊಟ್ಟರು
Laxmi News 24×7