ಹುಬ್ಬಳ್ಳಿ: ಇದ್ದದ್ದು ಎರಡೇ ಎಕರೆ ಜಮೀನು ಆದರೂ ನೆಮ್ಮದಿ-ತೃಪ್ತಿಯಿಂದ ಬದುಕುತ್ತಿದ್ದ ಆ ಕುಟುಂಬಕ್ಕೆ ಬರಸಿಡಲಿನ ಆಘಾತ ಬಂದೆರಗಿತ್ತು. ತಾನಾಯಿತು ತನ್ನ ಮನೆಯಾಯಿತು ಎಂದುಕೊಂಡಿದ್ದ ಮಹಿಳೆ ಆಧಾರಸ್ತಂಭ ಕಳೆದುಕೊಂಡು ಇಡೀ ಕುಟುಂಬಕ್ಕೆ ಆಧಾರವಾಗಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿತ್ತು.
ಈ ಸಂಕಷ್ಟ ಸಂದರ್ಭದಲ್ಲಿ ತರಬೇತಿ ಪಡೆದಿದ್ದೇನೆ.
ಇದ್ದರೆ ಮನೆಯಲ್ಲಿರಲಿ ಎಂದು ಪಡೆದಿದ್ದ ರೊಟ್ಟಿ ಯಂತ್ರವೇ ಇದೀಗ ಆ ಕುಟುಂಬಕ್ಕೆ ಪ್ರಮುಖ ಆಧಾರವಾಗಿದೆ. ರೊಟ್ಟಿ ತಟ್ಟುವ ಮೂಲಕವೇ ಆ ಮಹಿಳೆ ಇಡೀ ಕುಟುಂಬ ನಿರ್ವಹಣೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಸಣ್ಣಪುಟ್ಟ ಖರ್ಚಿಗಿರಲಿ ಎಂದು ಖರೀದಿಸಿದ್ದ ರೊಟ್ಟಿ ಯಂತ್ರವೇ ಇಂದು ಬದುಕಿನ ಬಂಡಿಸಾಗಿಸುವ ಸಾಧನವಾಗಿದೆ. ರೊಟ್ಟಿ ತಯಾರಿಸಿ ಅದರಿಂದ ಬರುವ ಹಣದಿಂದಲೇ ಒಂದು ಕುಟುಂಬದ ನಿರ್ವಹಣೆ ಆಗುತ್ತಿದೆ. ಇದು ಹಾವೇರಿ ಜಿಲ್ಲೆ ತಿಳವಳ್ಳಿ ಬಳಿಯ ಹುಲಗಡ್ಡಿ ಎಂಬ ಗ್ರಾಮದ ಮಹಿಳೆಯೊಬ್ಬರ ಸಂಕಷ್ಟದಿಂದ ಮೇಲೆದ್ದು ಬದುಕು ಕಟ್ಟಿಕೊಂಡ ಕಥೆಯಿದು.
ಹುಲಗಡ್ಡಿಯ ಶೀಲಾ ಕೊಟಗಿ ಅವರು ಸಣ್ಣದಾದ ರೊಟ್ಟಿ ಯಂತ್ರದೊಂದಿಗೆ ತನ್ನನ್ನೇ ನಂಬಿದ ನಾಲ್ವರನ್ನು ಸಲುಹುತ್ತಿದ್ದಾರೆ. ಇದರಲ್ಲಿ ತನ್ನಿಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಶೀಲಾ ಕೊಟಗಿ ಹತ್ತನೇ ತರಗತಿವರೆಗೆ ಓದಿದ್ದು, ಪತಿಯ ಕುಟುಂಬಕ್ಕೆ ಇದ್ದದ್ದು ಎರಡು ಎಕರೆ ಜಮೀನು ಮಾತ್ರ. ಪಕ್ಕದ ಒಂದಿಷ್ಟು ಜಮೀನು ಗುತ್ತಿಗೆ ಪಡೆದು ಕೃಷಿ ಕಾರ್ಯ ಮಾಡಲಾಗುತ್ತಿತ್ತು.
ಕಳೆದ ಐದಾರು ತಿಂಗಳ ಹಿಂದೆ ಶೀಲಾ ಅವರ ಪತಿ ಮೆದುಳು ಆಘಾತದಿಂದ ಮೃತಪಟ್ಟಿದ್ದು, ಕುಟುಂಬ ಆಧಾರಸ್ತಂಭವೇ ಕಳಚಿ ಬಿದ್ದಿದ್ದರಿಂದ ಮುಂದೇನು ಎಂಬ ಆತಂಕ-ಆಘಾತಕ್ಕೆ ಸಿಲುಕಿದ್ದ ಶೀಲಾ ಅವರು ಸುಧಾರಿಸಿಕೊಂಡು ಬದುಕು ಕಟ್ಟಿಕೊಳ್ಳಲು ಮುಂದಾದಾಗ ಅವರ ಕೈ ಹಿಡಿದಿದ್ದು ರೊಟ್ಟಿ ತಟ್ಟುವ ಯಂತ್ರ. ತಂದೆ-ತಾಯಿ ಇಬ್ಬರು ಮಕ್ಕಳನ್ನು ಇದೇ ರೊಟ್ಟಿ ಯಂತ್ರದಿಂದಲೇ ಸಲುಹುತ್ತಿದ್ದಾರೆ. ಮಕ್ಕಳಲ್ಲಿ ಒಬ್ಬರು ಎಸ್‌ಎಸ್‌ಎಲ್‌ಸಿ ಓದುತ್ತಿದ್ದರೆ, ಇನ್ನೊಬ್ಬರು ಎಂಟನೇ ತರಗತಿ ಓದುತ್ತಿದ್ದಾರೆ.
12-15 ಸಾವಿರ ರೊಟ್ಟಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯೆಯಾಗಿರುವ ಶೀಲಾ ಕೊಟಗಿ ಅವರು 12 ಸದಸ್ಯರ ತಂಡದಲ್ಲಿದ್ದಾರೆ. ಈ ಸಂಘ ಸುಮಾರು 30ಲಕ್ಷ ರೂ.ಗಳ ವಹಿವಾಟು ನಡೆಸಿದೆ. ಇದೇ ಸಂಘದಿಂದಲೇ ರೊಟ್ಟಿ ತಟ್ಟುವ ಯಂತ್ರದ ತರಬೇತಿಗೆಂದು ಹೋಗಿದ್ದ ಶೀಲಾ ಅವರು, ಸೆಲ್ಕೋ ಕಂಪೆನಿಯವರ ರೊಟ್ಟಿ ತಟ್ಟುವ ಯಂತ್ರ ಗಮನಿಸಿ, ಸೋಲಾರದಿಂದ ನಿರ್ವಹಣೆ ಆಗುವುದನ್ನು ಗಮನಿಸಿ ಮನೆಯಲ್ಲಿ ಸಣ್ಣ ಪುಟ್ಟ ವೆಚ್ಚ ನಿರ್ವಹಣೆಗೆ ಇದು ಸಹಕಾರಿ ಆಗಲಿದೆ, ಮನೆ ಕೆಲಸದ ನಡುವೆ ಕೈಲಾದಷ್ಟು ರೊಟ್ಟಿ ಮಾಡಿದರಾಯಿತು ಎಂದು ಯಂತ್ರ ಪಡೆದಿದ್ದರು.
Laxmi News 24×7