ಬಳ್ಳಾರಿ: ಮಾರ್ಚ್ 19 ರಂದು ಕಂಪ್ಲಿ ತಾಲೂಕಿನ ವಿಠ್ಠಲಾಪುರದ ಗುಡ್ಡದಲ್ಲಿ ಪತ್ತೆಯಾಗಿದ್ದ ಅನಾಮಧೇಯ ವ್ಯಕ್ತಿಯ ತಲೆಬುರುಡೆ ಪ್ರಕರಣವನ್ನು ಬಳ್ಳಾರಿ ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಲೆ ಬುರುಡೆ, ಶರ್ಟ್ ಆಧಾರದ ಮೇಲೆ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಮಾರ್ಚ್ 19 ರಂದು ಕಂಪ್ಲಿ ತಾಲೂಕಿನ ವಿಠ್ಠಲಾಪುರದ ಗುಡ್ಡದಲ್ಲಿ ಕೊಲೆ ನಡೆದಿತ್ತು. ಜೇರ್ವಗಿ ತಾಲೂಕಿನ ಬಳ್ಳಂಡುಗಿ ತಾಲೂಕಿನ ಅಮರೇಶ ಕೊಲೆಯಾಗಿದ್ದ ವ್ಯಕ್ತಿ.
ಅಮರೇಶ ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಇಂದಿರಾ ಪ್ಲಾಂಟ್ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ. ಶರ್ಟ್ ಆಧಾರದ ಮೇಲೆ ಗಂಗಾವತಿಯ ರಾಯಲ್ ಟೈಲರ್ನಲ್ಲಿ ಪೊಲೀಸರು ಸಾಕ್ಷಿ ಸಂಗ್ರಹಿಸಿದ್ದರು. ಅನಾಮಧೇಯ ಶವ ಪತ್ತೆಯಾದ ಬಗ್ಗೆ ಕಂಪ್ಲಿ ಪೊಲೀಸರು ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ್ದರು. ಕಂಪ್ಲಿ ಪೊಲೀಸರ ಪ್ರಕಟಣೆ ಕಂಡು ಅಮರೇಶ ನಾಪತ್ತೆ ಬಗ್ಗೆ ಕುಟುಂಬಸ್ಥರು ಸುಳಿವು ನೀಡಿದ್ದರು. ಬಳಿಕ ಶರ್ಟ್. ತೆಲೆ ಬರುಡೆ, ಕೊರಳ ಚೈನ್ ಆಧಾರದ ಮೇಲೆ ಕೊಲೆಯಾದ ವ್ಯಕ್ತಿಯ ಗುರುತನ್ನು ಕುಟುಂಬಸ್ಥರು ಪತ್ತೆ ಮಾಡಿದ್ದರು.
ಹಲವು ಸಾಕ್ಷಿ ಆಧಾರದ ಮೇಲೆ ಕಿರಣಕುಮಾರ್ ಹಾಗೂ ರೇವಣಸಿದ್ದ ಎಂಬುವರನ್ನು ಪೊಲೀಸರು ಬಂಧಿಸಿದ್ದು, ತೆಲೆ ಮರೆಸಿಕೊಂಡಿರುವ ಮಲ್ಲಯ್ಯ, ಸಂಗಣ್ಣಗೆ ಪೊಲೀಸರ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಆರೋಪಿ ಕಿರಣ ಕುಮಾರ್ ತಂಗಿಯನ್ನ ಚುಡಾಯಿಸಿದಕ್ಕೆ ಅಮರೇಶನನ್ನು ಆರೋಪಿಗಳು ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ. ಮಾರ್ಚ್ 28 ರಂದು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿತ್ತು.