Breaking News

ನವವಧು ಮೇಲೆ ಪತಿ ಸಹೋದರನಿಂದಲೇ ಅತ್ಯಾಚಾರ

Spread the love

ಆಕೆಗೆ ಹದಿನೈದು ದಿನಗಳ ಹಿಂದೆ ಮದುವೆಯಾಗಿತ್ತು.‌ ಹೊಸ ಜೀವನದ ಹೊಸ್ತಿಲಿಗೆ ಆಸೆಗಣ್ಣುಗಳಿಂದಲೇ ಗಂಡನ ಮನೆಗೆ ಹೆಜ್ಜೆ ಇಟ್ಟಿದ್ದ ಆಕೆಗೆ, ತಿಂಗಳು ಕಳೆಯುವ ಮುನ್ನವೇ ನರಕ ದರ್ಶನವಾಗಿದೆ. ತನ್ನ ಗಂಡನ ಸಹೋದರನೆ ಇಪ್ಪತ್ತು ವರ್ಷದ ನವವಧುವಿನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ್ದಾನೆ.‌

ಈ ಅಮಾನವೀಯ, ಅನಾಗರಿಕ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ, ಡಾಂಕುರ್ ಪ್ರದೇಶದಲ್ಲಿ ಗುರುವಾರದಂದು ನಡೆದಿದೆ.

ಹೀನ ಕೃತ್ಯ ಎಸಗಿದ ಪಾಪಿ ತಲೆಮರೆಸಿಕೊಂಡಿದ್ದು, ಪೊಲೀಸರ ವಿಶೇಷ ತಂಡವೊಂದು ಆತನನ್ನು ಹುಡುಕಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.ಸಂತ್ರಸ್ತೆಯ ಪತಿ ಗುರುವಾರ ಬೆಳಗ್ಗೆ, ಸುಮಾರು ಹನ್ನೊಂದು ಗಂಟೆಯ ಸಮಯದಲ್ಲಿ ಮನೆಯಿಂದ ಕೆಲಸಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಆಕೆಯ ಕೂಗು ಹೊರಗೆ ಕೇಳಿಸಬಾರದು ಎಂದು ಆರೋಪಿ, ಲೌಡ್ ಸ್ಪೀಕರ್ ನಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದ ಎಂದು ಸಂತ್ರಸ್ತೆ ನೀಡಿರುವ ದೂರಿನಿಂದ ತಿಳಿದು ಬಂದಿದೆ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ