Breaking News

ತಮ್ಮ ಹಡಗನ್ನೇ ಸ್ಫೋಟಿಸಿಕೊಂಡ ಉಕ್ರೇನ್ ಸೇನೆ!

Spread the love

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಶುರು ಮಾಡಿ ಇವತ್ತಿಗೆ ಒಂಬತ್ತನೇ ದಿನ. ಈ ನಡುವೆ ಉಕ್ರೇನ್‍ನ ಹಡಗೊಂದನ್ನು ಉಕ್ರೇನ್ ಸೈನಿಕರೇ ಸ್ಫೋಟಿಸಿ ಮುಳುಗಿಸಿದ್ದಾರೆ.

ರಷ್ಯಾ ಸೇನೆ ಕಂಡುಕೇಳರಿಯದ ರೀತಿಯಲ್ಲಿ ಉಕ್ರೇನ್ ಮೇಲೆ ಬಾಂಬ್, ಕ್ಷಿಪಣಿ ದಾಳಿ ನಡೆಸ್ತಿವೆ. ಈ ಹಿನ್ನೆಲೆ ಖಾರ್ಕೀವ್, ಚೆರ್ನಿಹೀವ್, ಸುಮಿ, ಕೀವ್ ನಗರಗಳು ತತ್ತರಿಸಿದ್ದು, ಸ್ಮಶಾನದಂತಾಗಿಬಿಟ್ಟಿವೆ. ಸದ್ಯ ರಷ್ಯಾ ಆರ್ಮಿ ಕೀವ್‍ನಿಂದ 20 ಮೈಲಿ ದೂರದಲ್ಲಿ ಬೀಡುಬಿಟ್ಟಿದೆ. ಮುಂದಿನ ಆದೇಶಕ್ಕಾಗಿ ಕಾಯ್ತಿದೆ.

ಜಾಪೋರಿಷಿಯಾ ಸಮೀಪದ ಎನರ್ವೋದರ್ ನಗರ ವಶಕ್ಕೆ ಪಡೆಯಲು ಮುಂದಡಿ ಇಟ್ಟಿದೆ. ಭಾರೀ ಸಾವು-ನೋವು, ಆರ್ಥಿಕ ನಷ್ಟ ಉಂಟಾಗ್ತಿದ್ದರೂ, ರಷ್ಯಾ ಸೇನೆ ವಿರುದ್ಧ ಉಕ್ರೇನ್ ಪಡೆಗಳು ಹಿಂದಡಿಯಿಟ್ಟಿಲ್ಲ. ತೀವ್ರ ಸ್ವರೂಪದಲ್ಲಿ ತಿರುಗೇಟು ನೀಡುತ್ತಿವೆ. ಗೆರಿಲ್ಲಾ ಮಾದರಿಯ ಯುದ್ಧವ್ಯೂಹದ ಮೂಲಕ ರಷ್ಯಾ ಪಡೆಗಳನ್ನು ಎದಿರುಸುತ್ತಿವೆ. ಕಂಡಕಂಡದಲ್ಲಿ ರಷ್ಯಾದ ಯುದ್ಧ ಟ್ಯಾಂಕ್‍ಗಳಿಗೆ ಬೆಂಕಿ ಹಚ್ಚುತ್ತಿವೆ.

ಕೀವ್ ಜೂನಲ್ಲಿನ ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಈ ಮಧ್ಯೆ ಉಕ್ರೇನ್‍ನ ಹಡಗೊಂದನ್ನು ಉಕ್ರೇನ್ ಸೈನಿಕರೇ ಸ್ಫೋಟಿಸಿ ಮುಳುಗಿಸಿದ್ದಾರೆ. ಮೊದಲು ಇದನ್ನು ನ್ಯಾಟೋ ಸದಸ್ಯ ರಾಷ್ಟ್ರ ಎಸ್ಟೋನಿಯಾಗೆ ಸೇರಿದ ಹಡಗು ಎಂದು ಹೇಳಲಾಗಿತ್ತು. ಈಗ ಉಕ್ರೇನ್‌ ನೌಕಾ ಸೇನೆಯವರೇ ನೌಕೆಯನ್ನುಸ್ಫೋಟಿಸಿ ಮುಳುಗಿಸಿದ್ದಾರೆ. ಒಂದು ವೇಳೆ ಈ ನೌಕೆ ರಷ್ಯಾ ಸೇನೆಗೆ ಸಿಕ್ಕಿದರೆ ವಿಜಯಿ ಆಗಿದ್ದೇವೆ ಎಂದು ಹೇಳಿಕೊಳ್ಳುವ ಸಾಧ್ಯತೆ ಇತ್ತು. ಶತ್ರು ರಾಷ್ಟ್ರಕ್ಕೆ ಮಾಹಿತಿ ಸುಲಭವಾಗಿ ಸಿಗುವ ಸಾಧ್ಯತೆ ಇತ್ತು. ಈ ಕಾರಣಕ್ಕೆ ಉಕ್ರೇನ್‌ ಸೇನೆಯೇ ಹಡಗನ್ನು ಸ್ಫೋಟಗೊಳಿಸಿದೆ ಎಂದು ವರದಿಯಾಗಿದೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ