ಬೆಂಗಳೂರು: ಈಗಾಗಲೇ ಎರಡು ದಿನಗಳ ಹಿಂದಷ್ಟೇ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆ ಎಸಿಬಿ ಅಧಿಕಾರಿಗಳು ( ACB Officer ) ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ 27 ವಿಭಾಗೀಯ ಕಚೇರಿಗಳ ಮೇಲೆ ದಾಳಿ ( ACB Raid ) ನಡೆಸಿ, ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದರು.
ಇದೀಗ ಇಂದು ಮತ್ತೆ ಎಸಿಬಿ ಅಧಿಕಾರಿಗಳು ಬಿಬಿಎಂಪಿ ಕಚೇರಿಗಳ ( BBMP Office ) ಮೇಲೆ ದಾಳಿ ನಡೆಸಿರೋದಾಗಿ ತಿಳಿದು ಬಂದಿದೆ.
ಎರಡು ದಿನಗಳ ಹಿಂದೆ ಬಿಬಿಎಂಪಿಯ ಕೇಂದ್ರ ಕಚೇರಿ ಸೇರಿ 27 ವಿಭಾಗೀಯ ಕಚೇರಿಗಳ ಮೇಲೆ ಎಸಿಬಿಯ 200ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ, ಭ್ರಷ್ಟಾಚಾರ ಸಂಬಂಧ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು.
ಬಿಬಿಎಂಪಿಯ ಕಂದಾಯ, ಟಿಡಿಆರ್, ನಗರ ಯೋಜನೆ, ಜಾಹೀರಾತು ವಿಭಾಗ ಸೇರಿದಂತೆ ಹಲವು ವಿಭಾಗಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದ್ದರು. ಆದ್ರೇ ಶನಿವಾರ, ಭಾನುವಾರದ ರಜೆಯ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ದಾಖಲೆಗಳ ಪರಿಶೀಲನೆ ನಿಲ್ಲಿಸಲಾಗಿತ್ತು.
ಇಂದು ಪುನಹ 200 ಎಸಿಬಿ ಅಧಿಕಾರಿಗಳು ಏಕಕಾಲಕ್ಕೆ ಬಿಬಿಎಂಪಿಯ ಕೇಂದ್ರ ಕಚೇರಿ ಸೇರಿದಂತೆ ವಿವಿಧ ಕಚೇರಿಗಳ ಮೇಲೆ ದಾಳಿ ನಡೆಸಿ, ತಮ್ಮ ದಾಖಲೆಗಳ ಪರಿಶೀಲನೆಯನ್ನು ಮುಂದುವರೆಸಿದ್ದಾರೆ. ಈ ಮೂಲಕ ಬಿಬಿಎಪಿಯ ಕೆಲ ವಿಭಾಗಗಳಲ್ಲಿ ನಡೆದಿದೆ ಎನ್ನಲಾದಂತ ದೊಡ್ಡ ಮಟ್ಟದ ಭ್ರಷ್ಟಾಚಾರ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.