ಬೆಂಗಳೂರು : ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ ಹಾಗೂ ಕ್ರಿಮಿನಲ್ ಕಾನೂನು ತಿದ್ದುಪಡಿ ಆಧ್ಯಾದೇಶ, 1944 (ಕರ್ನಾಟಕ ತಿದ್ದುಪಡಿ ) ವಿಧೇಯಕಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಕಂದಾಯ ಸಚಿವ ಆರ್. ಅಶೋಕ್, ನೊಂದಾಯಿತ ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘದ ನಿವೇಶನ ಮಾರಾಟ ಮಾಡಿದ ದಿನಾಂಕದಂದು ಇರುವ ಮಾರುಕಟ್ಟೆಯ ಮೌಲ್ಯದ ಮುದ್ರಾಂಕ ಶುಲ್ಕ ಪಾವತಿಸುವ ಸಂಬಂಧ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು.
ಸಹಕಾರ ಸಂಘಗಳ ಅಧಿನಿಯಮದಡಿಯಲ್ಲಿ ನೊಂದಾಯಿಸಿದ ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘದಿಂದ ಹಂಚಿಕೆಯಾದ ನಿವೇಶನವನ್ನು ಭೋಗ್ಯ ಮತ್ತು ಮಾರಾಟ ಕರಾರು ಮಾಡಿಕೊಳ್ಳಲಾಗುತ್ತದೆ. ಅಂತಹ ಮಾಡಿಕೊಂಡ ಕರಾರನ್ನು ಬರೆದುಕೊಟ್ಟ ದಿನಾಂಕದಂದು ಇದ್ದ ನಿವೇಶನದ ಮೌಲ್ಯದ ಮೇಲೆ ಇರಬೇಕು. ಇದರಿಂದ ಅಂದಾಜು ಐದರಿಂದ ಆರು ಕೋಟಿ ರೂ. ವಾರ್ಷಿಕವಾಗಿ ಸರ್ಕಾರಕ್ಕೆ ಕೊರತೆಯಾಗಲಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.