ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನ್ ಇಂಡಿಯಾ ಹೀರೋ. ಅವರ ಸಿನಿಮಾ ಬರ್ತಿದೆ ಅಂದರೆ ಭಾರತದಾದ್ಯಂತ ಪ್ರೇಕ್ಷಕರು ಕಾದು ಸಿನಿಮಾ ನೋಡ್ತಾರೆ. ಭಾರತದಾದ್ಯಂತ ಯಶ್‌ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾದ ನಂತರ ಯಶ್ ಅವರು ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದು ಸೌತ್ ಇಂಡಿಯಾ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ.
ಈಗ ಎಲ್ಲರೂ ಯಶ್ ಅವರನ್ನು ಕೆಜಿಎಫ್2 ಚಿತ್ರದಲ್ಲಿ ಕಣ್ತುಂಬಿಕೊಳ್ಳು ಕಾಯುತ್ತಿದ್ದಾರೆ. ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಈಗ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅದೇನಂದ್ರೆ ಬಾಲಿವುಡ್ ಬೆಡಗಿ ನೋರಾ ಫತೇಹಿ ಯಶ್‌ಗಾಗಿ ಕನ್ನಡಕ್ಕೆ ಬರ್ತಿದ್ದಾರಂತೆ.
ಕೆಜಿಎಫ್ 2 ಚಿತ್ರದಲ್ಲಿಯ ಒಂದು ಐಟಂ ಹಾಡಿಗೆ ಬಾಲಿವುಡ್ ಖ್ಯಾತ ನಟಿ, ಡ್ಯಾನ್ಸರ್ ನೋರಾ ಫತೇಹಿ ಹೆಜ್ಜೆ ಹಾಕುತ್ತಾರೆ ಎಂದು ಈ ಮುಂಚೆ ಸುದ್ದಿಯಾಗಿತ್ತು. ಈ ಸುದ್ದಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಜೋರಾಗಿದೆ. ನೋರಾ ಯಶ್ ಜೊತೆಗೆ ಡ್ಯಾನ್ಸ್ ಮಾಡುವುದು ಖಚಿತ ಎನ್ನಲಾಗುತ್ತಿದೆ. ಈ ವಿಶೇಷ ಹಾಡಿಗಾಗಿ ರೆಟ್ರೋ ಹಾಡುಗಳನ್ನು ಮತ್ತೆ ರಿಮೇಕ್ ಮಾಡಲು ಚಿತ್ರ ತಂಡ ನಿರ್ಧರಿಸಿದೆ.