Breaking News

ತೆರಿಗೆದಾರರಿಗೆ ಕೇಂದ್ರ ಸರ್ಕಾರದಿಂದ ಬಿಗ್‌ ಗಿಫ್ಟ್‌ : ತೆರಿಗೆ ವಿನಾಯಿತಿ ಮಿತಿ ಹೆಚ್ಚಳ

Spread the love

ನವದೆಹಲಿ : ಕೇಂದ್ರ ಸರ್ಕಾರವು ವೇತನದಾರರು(Wage earners) ಮತ್ತು ಪಿಂಚಣಿದಾರರಿಗೆ(pensioners) ಆಶ್ರಯ ನೀಡುವ ಸಾಧ್ಯತೆಯಿದೆ. ಸದ್ಯದಲ್ಲೇ ಮಂಡಿಸಲಿರುವ ಬಜೆಟ್ ಮೂಲಕ ಏರುತ್ತಿರುವ ಹಣದುಬ್ಬರ(Inflation) ಹೊರೆ ತಗ್ಗಿಸುವತ್ತ ಚಿತ್ತ ಹರಿಸಿದ್ದು, ತೆರಿಗೆ ಹೊರೆ ತಗ್ಗಿಸಲು ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ(Standard deduction limit)ಯನ್ನ ಹೆಚ್ಚಿಸಲಾಗುವುದು ಎನ್ನಲಾಗ್ತಿದೆ.

ಅದ್ರಂತೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಫೆಬ್ರವರಿ 1, 2022 ರಂದು ಮಂಡಿಸಲಿರುವ ಬಜೆಟ್ ಮೂಲಕ ಒಳ್ಳೆಯ ಸುದ್ದಿ ನೀಡುವ ನಿರೀಕ್ಷೆಯಿದೆ.

ತೆರಿಗೆ ವಿನಾಯಿತಿ 75,000 ರೂ.ಗೆ ಏರಿಕೆ!
ನಿರ್ಮಲಾ ಸೀತಾರಾಮನ್ ಅವ್ರು ಪ್ರಸ್ತುತ ಸ್ಟ್ಯಾಂಡರ್ಡ್ ಡಿಡಕ್ಷನ್ 50,000 ರೂ.ಮಿತಿಯನ್ನ 75,000 ಅಥವಾ 50 ಪ್ರತಿಶತಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ. ಒಂದು ವೇಳೆ ಹೆಚ್ಚಿಸಿದರೆ ಮೋದಿ ಸರಕಾರದಲ್ಲಿ ನಾಲ್ಕನೇ ಬಾರಿ. ವ್ಯಾಪಾರ ಕೋಣೆಗಳು, ಅನೇಕ ಅರ್ಥಶಾಸ್ತ್ರಜ್ಞರು ಬಜೆಟ್‌ನಲ್ಲಿ ಪ್ರಮಾಣಿತ ಕಡಿತದ ಮಿತಿಯನ್ನ ಹೆಚ್ಚಿಸಲು ಮತ್ತು ತೆರಿಗೆದಾರರ ಮೇಲಿನ ಬೆಲೆ ಮತ್ತು ತೆರಿಗೆ ಹೊರೆಯನ್ನ ಕಡಿಮೆ ಮಾಡಲು ಬಯಸುತ್ತಾರೆ.

 


Spread the love

About Laxminews 24x7

Check Also

ಖಾನಾಪೂರ ಪೊಲೀಸರು 4 ಕಳ್ಳತನ ಪ್ರಕರಣಗಳ ತನಿಖೆಯಲ್ಲಿ 14.90 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ವಶಕ್ಕೆ ಪಡೆದುಕೊಂಡು ಆರೋಪಿಗಳ ಬಂಧನ ಮಾಡಿದ್ದಾರೆ

Spread the love ಖಾನಾಪೂರ ಪೊಲೀಸರು 4 ಕಳ್ಳತನ ಪ್ರಕರಣಗಳ ತನಿಖೆಯಲ್ಲಿ 14.90 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ವಶಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ