ಸಕ್ಕರೆನಾಡು ಮಂಡ್ಯ, ನಾಟಿಕೋಳಿ ಸಾರು ಮುದ್ದೆಗೆ ಹೆಸರುವಾಸಿ ಅಂತಾದ್ರಲ್ಲಿ ಮುದ್ದೆ ತಿನ್ನೋ ಸ್ಪರ್ದೇ ಇಟ್ರೆ ಸುಮ್ಮನೆ ಇರೋಕಾಗುತ್ತ..
ಒಂದ್ ಕೈ ನೋಡೇ ಬಿಡೋಣ ಅಂತ ಊರಿನ ಗ್ರಾಮಸ್ತರೆಲ್ಲ ಜಮಾಯಿಸಿದ್ರೂ. ಹಿಂಗೆ ನಾಟಿಕೋಳಿ ಸಾರು ಮುದ್ದೆ ತಿನ್ನೋ ಸ್ಪರ್ದೆ ನಡೆದಿದ್ದು ಮಂಡ್ಯ ತಾಲೋಕಿನ ಕೊತ್ತತ್ತಿ ಗ್ರಾಮದಲ್ಲಿ.
ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದಲ್ಲಿ ನಡೆದ ಗ್ರಾಮೀಣ ಕ್ರೀಡೆಯನ್ನ ವಿಶ್ವೇಶ್ವರಯ್ಯ ಯುವಕರ ಬಳಗದಿಂದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸುಮಾರು 50 ಕ್ಕೂ ಹೆಚ್ಚು ಗ್ರಾಮೀಣ ಸ್ಪರ್ಧಿಗಳ ಭಾಗವಹಿಸಿದ್ರು. ಇದ್ರಲ್ಲಿ ಬರೊಬ್ಬರಿ 2.5 kg ಮುದ್ದೆ ತಿಂದು ಮೊತ್ತಹಳ್ಳಿ ಕೆಂಪರಾಜು. ಮೊದಲ ಬಹುಮಾನ ಪಡೆದ್ರೆ.ಹುಣಸಹಳ್ಳಿಯ ಶಿವಣ್ಣ2.3 Kg ಮುದ್ದೆ ತಿಂದು ಎರಡನೇ ಬಹುಮಾನ ಪಡೆದ, ಇನ್ನೂ ಹುಲ್ಕೇರೆ ಪ್ರಶಾಂತ್ ಅನ್ನೋರು 2.2kg ಮುದ್ದೆ ತಿಂದು ಮೂರನೇ ಬಹುಮನ ಪಡೆದ್ರು. 2.1 ಕೆಜಿ ಮುದ್ದೆ ತಿಂದು ಹನಿಯಂಬಾಡಿ ಮಹೇಶ್ ಸಮಾಧಾನಕರ ಬಹುಮಾನಕ್ಕೆ ತೃಪ್ತಿ ಪಟ್ರು.
ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗೆದ್ದವರಿಗೆ 5001 ಸಾವಿರ ಮತ್ತು ಟ್ರೋಫಿ.. ದ್ವಿತೀಯ ಬಹುಮಾನ ಗೆದ್ದವರಿಗೆ 3001 ಸಾವಿರ ಮತ್ತು ಟ್ರೋಫಿ.. ತೃತೀಯ ಬಹುಮಾನವಾಗಿ ಗೆದ್ದವರಿಗೆ 1001 ರೂ ಮತ್ತು ಟ್ರೋಫಿ..ನಾಲ್ಕನೇಯ ಸಮಾಧಾನಕರ ಬಹುಮಾನ ಪಡೆದವರಿಗೆ 1001 ಮತ್ತು ಟ್ರೋಫಿ ವಿತರಣೆ.