Breaking News
Home / ರಾಜಕೀಯ / ಉತ್ತರ ಕರ್ನಾಟಕ ಭಾಗದಲ್ಲಿ ಮಳೆ : ಹವಾಮಾನ ತಜ್ಞರ ಮಾಹಿತಿ

ಉತ್ತರ ಕರ್ನಾಟಕ ಭಾಗದಲ್ಲಿ ಮಳೆ : ಹವಾಮಾನ ತಜ್ಞರ ಮಾಹಿತಿ

Spread the love

ಧಾರವಾಡ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಸದ್ಯ ಉತ್ತರ ಕರ್ನಾಟಕಕ್ಕೆ ಮಳೆ ಆತಂಕ ಇಲ್ಲ ಎಂದು ಹವಾಮಾನ ತಜ್ಞ ಡಾ.‌ಆರ್.ಹೆಚ್. ಪಾಟೀಲ‌ ಮಾಹಿತಿ ನೀಡಿದ್ದಾರೆ.

ಈ‌ ಕುರಿತು ಮಾತನಾಡಿರುವ ಅವರು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಆಗಿತ್ತು. ಅದರ ಮಾರುತಗಳು ಉತ್ತರಮುಖ ಚಲನೆ ಹೊಂದಿದ್ದವು. ಅದರಿಂದ ರಾತ್ರಿ ಮತ್ತು ಬೆಳಗ್ಗೆ ಮಳೆಯಾಗಿತ್ತು. ಆದರೆ ನಾಳೆ (ಶುಕ್ರವಾರ) ಯಾವುದೇ ಮಳೆ ಲಕ್ಷಣ ಇಲ್ಲ. ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣ ಇರಲಿದೆ. ಸದ್ಯ ಮಳೆ ಮಾರುತಗಳು ಮಹಾರಾಷ್ಟ್ರದತ್ತ ಚಲನೆ ಮಾಡಿವೆ. ಹೀಗಾಗಿ ನಮ್ಮ ಭಾಗದಲ್ಲಿ ಸದ್ಯಕ್ಕೆ ಮಳೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಡಿ. 3ರಿಂದ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಲಿದ್ದು, ಚಂಡಮಾರುತ ಆಗುವ ಲಕ್ಷಣ ಇದೆ‌. ಅದು‌ ಪಶ್ಚಿಮೋತ್ತರವಾಗಿ ಚಲಿಸಲಿದೆ. ಹೀಗಾಗಿ ಅದರ ಬಾಧೆ ಕರ್ನಾಟಕಕ್ಕೆ ಇಲ್ಲ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಮಾಜಿ ಪ್ರಧಾನಿಗಳ ಮೊಮ್ಮಗ, ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡು : ಡಿಕೆಶಿ

Spread the loveಬೆಂಗಳೂರು,ಏ.28- ತಲೆ ತಗ್ಗಿಸುವ ಕೆಲಸ ಮಾಡಿ ಮಾಜಿ ಪ್ರಧಾನಿಗಳ ಮೊಮ್ಮಗ ಹಾಗೂ ಸಂಸದ ದೇಶ ಬಿಟ್ಟು ಪರಾರಿಯಾಗಿರುವುದು ನಾಚಿಕೆಗೇಡಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ