Breaking News

ಗೋವಾ ಚುನಾವಣೆ : 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶಿವಸೇನೆ ನಿರ್ಧಾರ

Spread the love

ಪಣಜಿ: ಶಿವಸೇನೆಯು ಗೋವಾ ವಿಧಾನಸಭಾ ಚುನಾವಣೆಯಲ್ಲಿ 25 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.

ಶಿವಸೇನೆಯ ಗೋವಾ ರಾಜ್ಯ ಪ್ರಮುಖರಾದ ಜಿತೇಶ್ ಕಾಮತ್, ಮಿಲಿಂದ ಗಾವಸ್ ರವರು ಮುಂಬಯಿಯ ಖಾಸಗಿ ಹೋಟೆಲ್‍ನಲ್ಲಿ ಶಿವಸೇನೆಯ ರಾಷ್ಟ್ರೀಯ ನಾಯಕ ಸಂಜಯ ರಾವುತ್ ರವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದರು.

ಶಿವಸೇನೆ ಪಕ್ಷ ಪ್ರಮುಖ ಉದ್ಧವ ಠಾಕ್ರೆಯವರೊಂದಿಗೆ ಈ ಕುರಿತಂತೆ ಸಂಜಯ್ ರಾವುತ್ ರವರು ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಗೋವಾ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಶಿವಸೇನೆ ತನ್ನ ಬಲ ಹೆಚ್ಚಿಸಿಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದೆ.

 

ಶಿವಸೇನೆಯು ಗೋವಾ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡರೂ ಕೂಡ 16 ಕ್ಷೇತ್ರಗಳಲ್ಲಿ ಮಾತ್ರ ನಮ್ಮ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲಾಗುವುದು ಇದರಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದು ಜಿತೇಶ್ ಕಾಮತ್ ಪ್ರತಿಕ್ರಿಯೆ ನೀಡಿದರು.


Spread the love

About Laxminews 24x7

Check Also

ಗವರ್ನರ್ V/S ಗವರ್ನಮೆಂಟ್‌: ಭಾಷಣದ ಕೆಲ ಸಾಲು ಬದಲಾವಣೆಗೆ ನಿರ್ಧಾರ; ಒಪ್ಪದಿದ್ದರೆ ಕಾನೂನು ಹೋರಾಟವೆಂದ ಸರ್ಕಾರ

Spread the loveಬೆಂಗಳೂರು: ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ನಡುವೆ ಸಂಘರ್ಷ ಶುರುವಾದಂತಿದೆ‌. ಇಂದು ವಿಶೇಷ ಅಧಿವೇಶನಕ್ಕಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ