Breaking News

ಅನುಶ್ರೀ ಜೊತೆ ಮಾದಕ ವಸ್ತು ಸೇವಿಸಿ ಡ್ರಿಂಕ್ಸ್ ಪಾರ್ಟಿ ಮಾಡಿರ್ತೇನೆ’ -ಚಾರ್ಜ್​ಶೀಟ್​ನಲ್ಲಿ ಕಿಶೋರ್​ ಶೆಟ್ಟಿ ಹೇಳಿಕೆ ಉಲ್ಲೇಖ

Spread the love

ಬೆಂಗಳೂರು: ಆಯಂಕರ್ ಅನುಶ್ರೀ ವಿರುದ್ಧದ ಡ್ರಗ್​​ ಕೇಸ್​​ಗೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸಿಸಿಬಿ ಅಧಿಕಾರಿಗಳು ತಯಾರಿ ಮಾಡಿರುವ ಚಾರ್ಜ್​ಶೀಟ್​ ಲಭ್ಯವಾಗಿದೆ. ಈ ಪ್ರಕರಣದಲ್ಲಿ ಅನುಶ್ರೀ ಆರೋಪಿ‌ ಅಲ್ಲ. ಮಂಗಳೂರು ಡ್ರಗ್​​ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಿಶೋರ್ ಕೊಟ್ಟ ಹೇಳಿಕೆಯಲ್ಲಿ ಅನುಶ್ರೀ ಹೆಸರು ಬಂದಿದೆ. ಅನುಶ್ರೀ ಜೊತೆ ಸೇರಿ ಡ್ರಗ್ ಸೇವನೆ ಮಾಡಿರೋದಾಗಿ ಕಿಶೋರ್​ ಶೆಟ್ಟಿ ಹೇಳಿದ್ದಾನೆ. ಆತನ ಹೇಳಿಕೆಯನ್ನ ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ.

 

 

ಚಾರ್ಜ್​ಶೀಟ್​ನಲ್ಲಿ ಏನಿದೆ..?
ನಾನು ಸುಮಾರು 2007 – 08ರ ಸಮಯದಲ್ಲಿ ಬೆಂಗಳೂರಿನ ಸಂಜಯ್​ರವರ ಮಾಲೀಕತ್ವದ ಎಕ್ಸಿಬಿಸಿ ಡ್ಯಾನ್ಸ್​ ಅಕಾಡೆಮಿಯಲ್ಲಿದ್ದಾಗ ಟಿವಿ ಆಂಕರ್​ ಆಗಿರುವ ಅನುಶ್ರೀ ಅವರಿಗೆ ‘ಕುಣಿಯೋಣಾ ಬಾರಾ’ ಡ್ಯಾನ್ಸ್​ ನಲ್ಲಿ ಕೊರಿಯೋಗ್ರಫಿ ಮಾಡುತ್ತಿದ್ದ ನನ್ನ ಸ್ನೇಹಿತ ತರುಣ್​ ಈತನು ನನ್ನನ್ನು ಅನುಶ್ರೀ ರವರಿಗೆ ಪರಿಚಯ ಮಾಡಿಸಿ ಅವರಿಗೆ ಕುಣಿಯೋಣಾ ಬಾರಾ ಡ್ಯಾನ್ಸ್​ನ ಫೈನಲ್​ನಲ್ಲಿ ನನಗೂ ಸಹ ಕೊರಿಯೋಗ್ರಫಿ ಮಾಡುವಂತೆ ತಿಳಿಸಿದ್ದರಿಂದ ನಾನು ಮತ್ತು ತರುಣ್​ ಇಬ್ಬರೂ ಕೂಡಿ ಅನುಶ್ರೀ ರವರಿಗೆ ಡ್ಯಾನ್ಸ್​ ಕೊರಿಯೋಗ್ರಫಿ ಮಾಡಿರುತ್ತೇವೆ. ಈ ಪ್ರೊಗ್ರಾಂನಲ್ಲಿ ಅನುಶ್ರೀ ರವರು ವಿನ್​ ಆಗಿರುತ್ತಾರೆ. ಅನುಶ್ರೀ ರವರು ಈ ಡ್ಯಾನ್ಸ್​ ಕಾಂಪಿಟೇಶನ್​ ಪ್ರಾಕ್ಟೀಸ್​ ಆಡುವ ಸಮಯದಲ್ಲಿ ತರುಣ್​ ಬಾಡಿಗೆ ಮನೆಯಲ್ಲಿ ತಡರಾತ್ರಿತನಕ ಪ್ರಾಕ್ಟೀಸ್​ ಮಾಡುತ್ತಾ ಕೆಲವು ದಿನಗಳು ಅಲ್ಲೇ ಇದ್ದರು. ಕೆಲವೊಂದು ದಿನದಲ್ಲಿ ನಾನೂ ಕೂಡ ತರುಣ್​ನ ಜೊತೆ ಹೋಗಿದ್ದೆ. ಆ ದಿನಗಳಲ್ಲಿ ನಾವು ಮೂರು ಜನ ತನ ತರುಣ್​​ನ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುವ ಸಮಯ ಮಾದಕ ವಸ್ತುಗಳಾದ ಎಕ್ಸ್​ಟೆಸಿ ಪಿಲ್ಸ್​ಗಳನ್ನ ಸೇವನೆ ಮಾಡಿರುತ್ತೇವೆ.

ಅನುಶ್ರೀರವರು ವಿಜೇತವಾಗಿದ್ದಕ್ಕೆ ನಾನು ತರುಣ್ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತು ಎಕ್ಸ್​ಟೆಸಿ ಪಿಲ್ಸ್​ಗಳನ್ನ ಸೇವಿಸಿ ಡ್ರಿಂಕ್ಸ್ ಪಾರ್ಟಿ ಮಾಡಿರುತ್ತೇವೆ. ಮಾಕದ ವಸ್ತು ಸೇವನೆ ಖರೀದಿಯಲ್ಲಿ ಅನುಶ್ರೀ ಅವರು ಭಾಗಿಯಾಗಿರುತ್ತಾರೆ. ನಾವು ಡ್ಯಾನ್ಸ್​ ಪ್ರಾಕ್ಟೀಸ್ ಮಾಡುವ ಸಮಯ ಮತ್ತು ಅನುಶ್ರೀ ರವರಿಗೆ ಕೊರಿಯೋಗ್ರಾಫಿ ಪ್ರಾಕ್ಟೀಸ್​ ಮಾಡುವ ಸಮಯದಲ್ಲಿ ಹಲವು ಬಾರಿ ಮಾದಕವಸ್ತು ಎಕ್ಸ್​ಟೆಸಿ ಪಿಲ್ಸ್​ಗಳನ್ನು ಸೇವಿಸಿರುತ್ತೇವೆ. ಮತ್ತು ಅನುಶ್ರೀರವರು ಪ್ರಾಕ್ಟೀಸ್​ ಮಾಡಲು ನಮ್ಮ ರೂಮ್​ಗೆ ಬರುವಾಗ ಅವರು ಎಕ್ಸ್​​ಟೆಸಿ ಪಿಲ್ಸ್​​​ಗಳನ್ನು ಖರೀದಿಸಿ ತಂದು ನಮಗೆ ನೀಡಿ, ನಮ್ಮ ಜೊತೆ ಸೇವನೆಯನ್ನೂ ಕೂಡ ಮಾಡಿರುತ್ತಾರೆ. ಮತ್ತು ಡ್ಯಾನ್ಸ್ ಮಾಡಲು ಇದು ತಾಕತ್ತು ಕೊಡುತ್ತದೆ ಎಂದು, ಇದರಿಂದ ಡ್ಯಾನ್ಸ್​ ಮಾಡಲು ಖುಷಿ ಸಿಗುತ್ತದೆ. ಪ್ರಾಕ್ಟಿಸ್ ಮಾಡಲು ಸುಲಭವಾಗುತ್ತದೆ ಎಂದು ಕೂಡ ನಾವೆಲ್ಲರೂ ಮಾತನಾಡಿಕೊಳ್ಳುತ್ತಿದ್ದೆವು ಡ್ರಗ್ಸ್ ಯಾರು ನೀಡ್ತಾರೆ ಎಂದು ಅನುಶ್ರೀಯವರಿಗೆ ನಮಗಿಂತ ಹೆಚ್ಚು ತಿಳಿದಿದೆ. ಅವರಿಗೆ ಡ್ರಗ್ಸ್ ಪೆಡ್ಲರ್​ಗಳ ಪರಿಚಯ ಇರುತ್ತದೆ. ಅವರು ಸುಲಭವಾಗಿ ಮಾದಕ ವಸ್ತು ಡ್ರಗ್ಸ್​​ಗಳನ್ನು ತರಿಸುತ್ತಾರೆ. ಅವರು ಹೇಗೆ ತರಿಸುತ್ತಾರೆ ಎಂದು ನನಗೆ ತಿಳಿದಿಲ್ಲ.

ಕಳೆದ 2 ವರ್ಷಗಳ ಹಿಂದೆ ನನ್ನ ಡ್ಯಾನ್ಸ್ ಪಾರ್ಟನ್​​ ತರುಣ್​ ಮಂಗಳೂರಿನ ಬಿಜೈಯಲ್ಲಿ ಕ್ರೂಸ್​ ಇನ್ ಕ್ರೂ ಎಂಬ ಡ್ಯಾನ್ಸ್​ ಕ್ಲಾಸ್​ ಓಪನ್ ಮಾಡಿದ್ದ ಸಮಯದಲ್ಲಿ ಟಿವಿ ಌಂಕರ್ ಅನುಶ್ರೀಯವರು​ ಅದರ ಉದ್ಘಾಟನೆಗೆ ಮಂಗಳೂರಿಗೆ ಬಂದಿರುತ್ತಾರೆ. ನಾನೂ ಕೂಡ ಆ ಸಮಯ ಹೋಗಿದ್ದೆ. ಕಾರ್ಯಕ್ರಮ ಮುಗಿದ ಬಳಿಕ ಯಾವುದೇ ಪಾರ್ಟಿ ಫಂಕ್ಷನ್ ನಡೆದಿರುವುದಿಲ್ಲ. ಅನುಶ್ರೀರವರು ಉದ್ಘಾಟನೆ ಮುಗಿಸಿ ವಾಪಸ್ ಹೋಗಿರುತ್ತಾರೆ ಅಂತಾ ಹೇಳಿಕೆ ನೀಡಿರೋದನ್ನ ಪೊಲೀಸರು ಉಲ್ಲೇಖಿಸಿದ್ದಾರೆ.


Spread the love

About Laxminews 24x7

Check Also

ಕೇರಳ ಸಿಎಂ ಪುತ್ರಿಯ ಕಂಪನಿ ವಿರುದ್ಧ ತನಿಖೆಗೆ ಆದೇಶ ಪ್ರಶ್ನಿಸಿ ಮೇಲ್ಮನವಿ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್‌

Spread the love ಬೆಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ.ವೀಣಾ ಅವರು ನಿರ್ದೇಶಕಿಯಾಗಿರುವ ಎಕ್ಸಲಾಜಿಕ್‌ ಸಲ್ಯೂಷನ್‌ ಪ್ರೈವೇಟ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ