ಮಂಗಳೂರು: ಕೊರೊನಾ ವೈರಸ್ ಸೋಂಕು ತಡೆಯಲು ನೀಡಲಾಗುತ್ತಿರುವ ಲಸಿಕೆಗಳ ಪೈಕಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವೆ 84 ದಿನಗಳ ಅಂತರ ನಿಗದಿಪಡಿಸಲಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಬುಧವಾರ 19 ವರ್ಷದ ದಿನಗೂಲಿ ಕಾರ್ಮಿಕರೊಬ್ಬರಿಗೆ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ನೀಡಲಾಗಿದೆ.
ಎರಡು ಡೋಸ್ ಲಸಿಕೆ ನೀಡುವುದರ ಪರಿಣಾಮ ಏನಾಗಬಹುದು ಎನ್ನುವುದು ಆರೋಗ್ಯಾಧಿಕಾರಿಗಳು ಊಹಿಸುವುದು ಕಷ್ಟ. ಹೀಗಾಗಿ ಲಸಿಕೆ ಪಡೆದ ವ್ಯಕ್ತಿಯನ್ನು ನಿಗಾದಲ್ಲಿ ಇರಿಸಲಾಗಿದೆ. ಲಸಿಕೆ ಪಡೆದ 24 ಗಂಟೆಗಳ ಬಳಿಕ ಅವರಲ್ಲಿ ಯಾವುದೇ ಅಡ್ಡಪರಿಣಾಮ ಕಂಡುಬಂದಿಲ್ಲ.
ತಾಲ್ಲೂಕಿನ ದುಗ್ಗಲಡ್ಕ ಗ್ರಾಮದ ಶಾಲೆಯೊಂದರಲ್ಲಿ ನಡೆಯುತ್ತಿದ್ದ ಲಸಿಕೆ ಅಭಿಯಾನದ ವೇಳೆ ಈ ಅವಘಡ ನಡೆದಿದೆ. ಸರ್ಕಾರದ ವತಿಯಿಂದ ದೊಡ್ಡ ಮಟ್ಟದಲ್ಲಿ ಲಸಿಕೆ ಕಾರ್ಯಕ್ರಮ ನಡೆಯುತ್ತಿತ್ತು. ಹೀಗಾಗಿ ಲಸಿಕೆ ಪಡೆಯಲು ಬಯಸುವವರ ದೊಡ್ಡ ಗುಂಪೇ ಶಾಲೆಯ ಮುಂದೆ ನಿಂತಿತ್ತು. ಆಗ ಗೊಂದಲದ ನಡುವೆ ಈ ಪ್ರಮಾದ ಉಂಟಾಗಿದೆ.
Laxmi News 24×7