Breaking News

ನಡುರಸ್ತೆಯಲ್ಲಿ ದಂಡ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಚಳಿ ಬಿಡಿಸಿದ ರಮೇಶ್ ಕುಮಾರ್

Spread the love

ಚಿಂತಾಮಣಿ : ನಡುರಸ್ತೆಯಲ್ಲಿ ನಿಂತು ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದ ಚಿಂತಾಮಣಿ ನಗರ ಠಾಣಾ ಪೊಲೀಸರಿಗೆ ಮಾಜಿ ಸ್ಪೀಕರ್ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಚಳಿ ಬಿಡಿಸಿದ ಘಟನೆ ನಡೆಯಿತು.

ಶುಕ್ರವಾರ ನಗರ ಠಾಣಾ ಎಸ್‌ಐ ಮುಕ್ತಿಯಾರ್ ತಮ್ಮ ಸಿಬ್ಬಂದಿಯೊಂದಿಗೆ ತಾಲೂಕಿನ ಮಾಡಿಕೇರಿ ಕ್ರಾಸ್‌ನಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದು, ಈ ವೇಳೆ ಶ್ರೀನಿವಾಸಪುರದಿಂದ ಬೆಂಗಳೂರಿನ ಕಡೆ ಬಂದ ರಮೇಶ್ ಕುಮಾರ್ ರವರು ತಮ್ಮ ವಾಹನ ನಿಲ್ಲಿಸಿ ಬಂದು ದಂಡ ವಸೂಲಿ ಮಾಡುತ್ತಿದ್ದ ಪೋಲಿಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ದಂಡ ವಸೂಲಿ ಮಾಡದಂತೆ ಹೇಳಿದರು.

ನಿಮ್ಮ ಮಕ್ಕಳಿಗೆ ಒಳ್ಳೆಯದು ಆಗೋದು ಹೇಗೆ ? : ಮೊನ್ನೆಯಲ್ಲಾ ಗೃಹ ಮಂತ್ರಿಗಳು ಆದೇಶ ಮಾಡಿದ್ದಾರೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ದಂಡ ಹಾಕಬೇಡಿ ಎಂದು ನೀವೇಕೆ ಹಾಕುತ್ತೀರ ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೆಯದು ಆಗೋದು. ಏನು ಡಾಕ್ಯುಮೆಂಟ್ಟ್ ಚೆಕ್ ಮಾಡ್ತೀರ ನೀವು ?, ನಾಚಿಕೆಯಾಗ ಬೇಕು ನಿಮಗೆ, ಮಿನಿಸ್ಟರ್ ಮೊನ್ನೆತಾನೆ ಬಾಯಿಬಡ್ಕೊಂಡು ಹೇಳ್ತಾನೆ ನೀವು ಏನು ಮಾಡುವುದು ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೆಯದು ಆಗೊದು ಎಂದು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಉತ್ತರಿಸಿದ ಎಎಸ್‌ಐ ಮುಕ್ತಿಯಾರ್ ರವರು ಹೆಲ್ಮೆಟ್ ಹಾಕದೆ ಇರುವವರನ್ನು ಮತ್ತು ದಾಖಲೆಗಳು ಇಲ್ಲದವರನ್ನು ಪರಿಶೀಲನೆ ಮಾಡುತ್ತಿದ್ದೆವೆ ಸಾರ್ ಇನ್ನು ಮಾಡಲ್ಲ ಎಂದು ವಾಪಸ್ಸಾದರು.

ಇನ್ನು ಪೊಲೀಸ್ ರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ರಮೇಶ್ ಕುಮಾರ್ ರವರ ಆಡಳಿತ ವೈಖರಿಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ