Breaking News

ಪ್ರಯಾಣಿಕರಿಗೆ ನೆಕ್ಲೇಸ್ ಮರಳಿಸಿದ ಸಾರಿಗೆ ಸಿಬ್ಬಂದಿ

Spread the love

ಕಲಬುರ್ಗಿ: ವಿಜಯಪುರ ಜಿಲ್ಲೆಯ ಗಬಸಾವಳಗಿ ಗ್ರಾಮದಿಂದ ಕಲಬುರ್ಗಿಗೆ ಬಂದ ಪ್ರಯಾಣಿಕರೊಬ್ಬರು ಚಿನ್ನದ ಸರವಿದ್ದ ಬ್ಯಾಗ್ ಬಿಟ್ಟು ಹೋಗಿದ್ದನ್ನು ಗಮನಿಸಿದ ಸಾರಿಗೆ ಸಂಸ್ಥೆ ಸಿಬ್ಬಂದಿ ಅದನ್ನು ಪ್ರಯಾಣಿಕರಿಗೆ ವಾಪಸ್‌ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ವಿಜಯಪುರದ ಯರಗಲ್ ಗ್ರಾಮದ ಮಹೇಶ ಬಡಿಗೇರ ಅವರು ಭಾನುವಾರ ವಿಜಯಪುರ-ಕಲಬುರ್ಗಿ ಮಧ್ಯೆ ಸಂಚರಿಸುತ್ತಿದ್ದ ಬಸ್‌ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದರು. ಬಸ್‌ ಕಾರ್ಯಾಚರಣೆ ಮುಗಿಸಿ ಘಟಕ 1ಕ್ಕೆ ವಾಪಸಾದಾಗ ಚಾಲಕ ರಾಘವೇಂದ್ರ ಹಾಗೂ ನಿರ್ವಾಹಕ ಖಂಡೋಬಾ ಅವರು ಆ ಬ್ಯಾಗನ್ನು ಘಟಕ ವ್ಯವಸ್ಥಾಪಕ ಮಂಜುನಾಥ ಮಾಯಣ್ಣವರ ಅವರಿಗೆ ತಲುಪಿಸಿದ್ದರು. ಅದರಲ್ಲಿ ನಾಲ್ಕು ತೊಲೆ ಚಿನ್ನದ ನೆಕ್ಲೇಸ್ ಇತ್ತು. ಮಹೇಶ ಬಡಿಗೇರ ಅವರು ಈ ಬಗ್ಗೆ ಸಂಸ್ಥೆಯ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದರು. ಭದ್ರತಾ ಸಿಬ್ಬಂದಿ ಮಾಯಣ್ಣವರ ಅವರ ಗಮನಕ್ಕೆ ತಂದಾಗ ಚಾಲಕ, ನಿರ್ವಾಹಕರನ್ನು ವಿಚಾರಿಸಿದರು. ಮಹೇಶ ಅವರು ಟಿಕೆಟ್‌ ತೋರಿಸಿದಾಗ ಈ ಚಿನ್ನ ಅವರೇ ಬಿಟ್ಟು ಹೋಗಿದ್ದ ಬ್ಯಾಗ್‌ನಲ್ಲಿ ಸಿಕ್ಕಿತು ಎಂದು ಖಾತ್ರಿಪಡಿಸಿಕೊಂಡು ಚಿನ್ನದ ನೆಕ್ಲೇಸ್ ಮರಳಿಸಿದರು.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ