Breaking News

ಮನಸ್ಫೂರ್ತಿ ಹಾಗೂ ಶ್ರದ್ಧೆಯಿಂದ ಮಾಡಿದ್ರೆ ಯಾವುದು ಅಸಾಧ್ಯವಲ್ಲ ಎನ್ನುವುದು ಸಾಧಕರ ಮಾತು.

Spread the love

ಕೊಪ್ಪಳ: ಮನಸ್ಫೂರ್ತಿ ಹಾಗೂ ಶ್ರದ್ಧೆಯಿಂದ ಮಾಡಿದ್ರೆ ಯಾವುದು ಅಸಾಧ್ಯವಲ್ಲ ಎನ್ನುವುದು ಸಾಧಕರ ಮಾತು. ನಿಜ! ಸಾಧಿಸುವ ಛಲ ಇದ್ರೆ ಪಡೆಯುವ ಹುಚ್ಚು ಇರಬೇಕು ಅಂತಾರೆ. ಅದರಂತೆ ಇಲ್ಲೊಬ್ಬ ಪದವಿ ವಿದ್ಯಾರ್ಥಿ ತಾನು ಕಲಿತ ಚಿತ್ರಕಲೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

 

ಹೌದು! ಕಲೆಯೆನ್ನುವುದೇ ಹಾಗೆ ಒಂದು ಸಲ ಅದರ ಹುಚ್ಚು ಹಿಡಿದ್ರೆ, ಬರಿ ಬಣ್ಣ ಹಾಗೂ ಪೆನ್ಸಿಲ್​, ಪೇಂಟಿಂಗ್ ಬ್ರಷ್​ಗಳ ಮಧ್ಯೆ ಕಲಾವಿದರು ತಮ್ಮ ಕಾಲವನ್ನು ಕಳೆಯುತ್ತಾರೆ. ಕೊಪ್ಪಳದ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯ ನಿವಾಸಿ ಹರ್ಜತ್ ಬಳಿಗಾರ ಎಂಬಾತ ಇದೀಗ ಬಿಎ ಪ್ರಥಮ ವರ್ಷದಲ್ಲಿ ಓದುತ್ತಿದ್ದಾರೆ.‌

 

ಆದ್ರೆ ಈ ಹುಡುಗನ ಟ್ಯಾಲೆಂಟ್​ಗೆ ಎಲ್ಲರೂ ಫಿದಾ ಆಗ್ಲೆ ಬೇಕು! ತಾನು ಕಲಿತಿರುವ ಚಿತ್ರಕಲೆಯನ್ನು ಡಿಫರೆಂಟ್​ ಆಗಿ ಬಿಡಿಸುತ್ತಾನೆ. ಕೈಯಲ್ಲಿ ಬಾಲ್ ಇದ್ರೆ ಬಾಲ್​ನಿಂದ ಬಿಡಿಸುತ್ತಾನೆ. ಬಾಯಿಂದ, ಕಾಲಿಂದ್, ಬ್ಯಾಟ್, ಡಂಬಲ್ಸ್ ನಿಂದ ಉಲ್ಟಾ ಮಲಗಿ, ಬಾಯಿಂದ ಹಾಗೂ ಕಾಲಿನಿಂದ ಪೇಂಟಿಂಗ್ ಮಾಡುತ್ತಾರೆ.

 

 

ಹರ್ಜತ್​​ಗೆ ಬಾಲ್ಯದಿಂದಲೇ ಪೇಂಟಿಂಗ್ ಹುಚ್ಚು. ಶಿಕ್ಷರಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿ ಕೂಡ. ತಂದೆ ಚಾಂದ್ ಭಾಷಾ ಕೃಷಿ ಕೆಲಸ ಮಾಡುತ್ತಾರೆ. ತಾಯಿ ಅಲ್ಲಾಬಿ ಬಳೆ ಮಾರುತ್ತಾರೆ. ಇಮಾಮ್ ಎನ್ನುವ ಒಬ್ಬ ತಮ್ಮ ಇದ್ದಾರೆ. ಚಿಕ್ಕ ಹಾಗೂ ಬಡತನ ಕುಟುಂದಲ್ಲಿ ಬೆಳೆದ ಹರ್ಜತ್ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

 

 

ಲಾಕ್​ಡೌನ್​ ಸಮಯದಲ್ಲಿ ಮನೆಯಲ್ಲಿದ್ದ ಹುಡುಗ ಕಳೆದ ವರ್ಷದಿಂದ ಭಿನ್ನವಾಗಿ ಕಲೆಯನ್ನು ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಓದುವುದರಲ್ಲಿ ಎಷ್ಟು ಶ್ರದ್ಧೆ ಇದೆಯೋ ಅಷ್ಟೆ ಶ್ರದ್ಧೆ ತಾನು ಕಲಿತ ಕಲೆಯಲ್ಲೂ ಇದೆ ಎನ್ನುತ್ತಾರೆ ಹರ್ಜತ್.

 

 

ಈಗಾಗಲೇ ತಮಗೆ ಇಷ್ಟವಾದ ಸ್ವಾತಂತ್ರ್ಯ ಹೋರಾಟಗಾರರ, ಕ್ರೀಡಾ ಪಟುಗಳ ಹಾಗೂ ಸಾಧಕರ ಚಿತ್ರಗಳನ್ನು ಬಿಡಿಸಿದ್ದಾರೆ. ವಿಶೇಷವಾಗಿ, ಅಬ್ದುಲ್ ಕಲಾಂ, ಧೋನಿ, ವಿರಾಟ್ ಕೊಹ್ಲಿ ಅವರ ಚಿತ್ರಗಳನ್ನು ಭಿನ್ನ ರೀತಿಯಾಗಿ ಬಿಡಿಸಿದ್ದಾರೆ. ಅದರಲ್ಲೂ ಪೊಲೀಸ್ ಅಧಿಕಾರಿ ರವಿ.ಡಿ ಚೆನ್ನಣ್ಣವರ್ ಚಿತ್ರವು ಸಹ ಈ ಹುಡಗನಿಂದ ಭಿನ್ನವಾಗಿ ಅರಳಿದೆ.

 

ಇದೀಗ ಈ ಹುಡಗನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ತ ಸದ್ದು ಮಾಡುತ್ತಿವೆ. ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ


Spread the love

About Laxminews 24x7

Check Also

ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ

Spread the love ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ ಮೈಸೂರು: ಕನ್ನಡಕ್ಕೆ ಮೊದಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ