Breaking News

ಗಂಡನನ್ನು ತೊರೆದು ಪ್ರೀತಿಸಿದವನ ಜೊತೆ ರೈಲಿನಲ್ಲಿ ಮದುವೆಯಾದ ಯುವತಿ

Spread the love

ಪಾಟ್ನಾ: ಯುವ ಪ್ರೇಮಿಗಳಿಬ್ಬರು ಚಲಿಸುತ್ತಿದ್ದ ರೈಲಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಘಟನೆ ಬಿಹಾರಿನಲ್ಲಿ ನಡೆದಿದೆ.

ಬಿಹಾರದ ಸುಲ್ತಾನ್​ಗಂಜ್ ಪ್ರದೇಶದ ಭಿರ್ ಕುರ್ದ್ ಎಂಬ ಗ್ರಾಮದ ನಿವಾಸಿ ಆಶು ಕುಮಾರ್ ಹಾಗೂ ಅನು ಕುಮಾರಿ ಹೀಗೆ ವಿಭಿನ್ನವಾಗಿ ಮದುವೆಯಾದ ಪ್ರೇಮ ಪಕ್ಷಿಗಳು. ಹಲವು ವರ್ಷಗಳಿಂದ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಹುಡುಗಿ ಮನೆಯವರಿಗೆ ಗೊತ್ತಾಗಿತ್ತು. ಹೀಗಾಗಿ ತರಾತುರಿಯಲ್ಲಿ ಕಿರಣಪುರ್ ಹಳ್ಳಿಯ ಬೇರೊಬ್ಬನ ಜೊತೆ ಕಳೆದ ಎರಡು ತಿಂಗಳ ಹಿಂದ ಮದುವೆ ಮಾಡಿದ್ದರು. ತನ್ನ ಇಷ್ಟದ ವಿರುದ್ಧ ನಡೆದ ಮದುವೆ ಧಿಕ್ಕರಿಸಿದ ಅನುಕುಮಾರಿ ತನ್ನ ಪ್ರಿಯತಮನೊಂದಿಗೆ ಮನೆ ಬಿಟ್ಟು ಓಡಿ ಬಂದಿದ್ದಾಳೆ.

ಆಶು ಕುಮಾರ್ ಹಾಗೂ ಆಕೆ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಮದುವೆಯಾಗಿದ್ದಾರೆ. ಇವರ ಮ್ಯಾರೇಜಿನ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಈ ಘಟನೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಅಶು ಕುಮಾರ್, ನಾವು ಊರಲ್ಲೇ ಇದ್ದರೆ ಮನೆಯವರು ಸುಮ್ಮನಿರುವುದಿಲ್ಲ ಎಂದು ಬೆಂಗಳೂರಿಗೆ ಹೋಗಲು ನಿರ್ಧರಿಸಿದೆವು. ರೈಲಿನಲ್ಲಿ ತನಗೆ ತಾಳಿ ಕಟ್ಟುವಂತೆ ಅನು ಬಹಳ ಒತ್ತಾಯ ಮಾಡಿದಳು. ಹೀಗಾಗಿ, ಆಕೆಯ ಹಣೆಗೆ ಕುಂಕುಮವಿಟ್ಟು ರೈಲಿನೊಳಗೆ ಮದುವೆಯಾದೆ ಎಂದು ತಿಳಿಸಿದ್ದಾನೆ.


Spread the love

About Laxminews 24x7

Check Also

ಮಹಿಳೆಯರು ಅಭಿವೃದ್ಧಿಯಾದರೆ ಮನೆ, ದೇಶ ಅಭಿವೃದ್ಧಿಯಾದಂತೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Spread the love ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿದ ಸಚಿವರು  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ