Breaking News

ಮುಂಬೈ ಬಾರ್ಜ್‌ ದುರಂತ- ಕ್ಯಾಪ್ಟನ್‌ ವಿರುದ್ಧ ಎಫ್‌ಐಆರ್‌

Spread the love

ಮುಂಬೈ, ಮೇ 21: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಂಬೈನಿಂದ 35 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಮುಳುಗಿದ್ದ ಬಾರ್ಜ್ ಪಿ -305 ರ ಕ್ಯಾಪ್ಟನ್ ವಿರುದ್ಧ ನಿರ್ಲಕ್ಷ್ಯದಿಂದ ಜನರ ಸಾವಿಗೆ ಕಾರಣದ ಆರೋಪದಲ್ಲಿ ಮುಂಬೈ ಪೊಲೀಸರು ಶುಕ್ರವಾರ ಎಫ್‌ಐಆರ್ ದಾಖಲಿಸಿದ್ದಾರೆ.

261 ಜನರನ್ನು ಹೊತ್ತೊಯ್ಯುತ್ತಿದ್ದ ಬಾರ್ಜ್ ಪಿ -305 ರ ಸೋಮವಾರ ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮುಳುಗಿತ್ತು. ಈ ಘಟನೆ ನಡೆದು ಐದು ದಿನಗಳಾಗಿದ್ದು ಈವರೆಗೆ 49 ಶವಗಳು ಪತ್ತಯಾಗಿದ್ದು ಇನ್ನೂ 26 ಮಂದಿ ನಾಪತ್ತೆಯಾಗಿದ್ದಾರೆ. ಇನ್ನು ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಈ ನಾಪತ್ತೆಯಾಗಿರುವ 26 ಮಂದಿ ಪೈಕಿ ಕ್ಯಾಪ್ಟನ್ ಕೂಡಾ ಒಬ್ಬರು.

ಸುಮಾರು 24 ಗಂಟೆಗಳ ಕಾಲ ಸಮುದ್ರದಲ್ಲೇ ಉಳಿದಿದ್ದ ಬಾರ್ಜ್‌ನ ಮುಖ್ಯ ಎಂಜಿನಿಯರ್ ರೆಹಮಾನ್ ಶೇಖ್‌ನನ್ನು ರಕ್ಷಿಸಿದ ಬಳಿಕ, ಕ್ಯಾಪ್ಟನ್ ಹವಾಮಾನ ಇಲಾಖೆಯ ಎಚ್ಚರಿಕೆ ನಿರ್ಲಕ್ಷಿಸಿದ ಆರೋಪದಲ್ಲಿ ಕ್ಯಾಪ್ಟನ್‌ ವಿರುದ್ದ ದೂರು ದಾಖಲು ಮಾಡಲಾಗಿದೆ.

ಇನ್ನು ಗಾಯಗೊಂಡು ಮುಂಬೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾರ್ಜ್‌ನ ಮುಖ್ಯ ಎಂಜಿನಿಯರ್ ರೆಹಮಾನ್ ಶೇಖ್‌ ಮತ್ತೊಬ್ಬ ಮುಖ್ಯ ಎಂಜಿನಿಯರ್‌ ಆದ ತನ್ನ ಸಹೋದರ ಆಲಂ ಶೇಖ್ ಬಳಿ, “ಗಾಳಿಯ ವೇಗವು ಅಧಿಕವಾಗಿತ್ತು” ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ನು ಬಾರ್ಜ್‌ನಲ್ಲಿ ರಂಧ್ರವಾಗಿದ್ದು, ಇದನ್ನು ಗಮನಿಸಿದ ನನ್ನ ಸ್ನೇಹಿತ ಆನಂದ್ ನನಗೆ ತಿಳಿಸಿದ. ನಾನು ತಕ್ಷಣ ಮಾಲೀಕರಿಗೆ ಕರೆ ಮಾಡಿ ಬಾರ್ಜ್‌ನ್ನು ಹಿಂತಿರುಗಿಸಲು ತಿಳಿಸಿದೆ. ಆದರೆ ಅದಕ್ಕೆ ಕ್ಯಾಪ್ಟನ್‌ ಪ್ರತಿಕ್ರಿಯಿಸಿಲ್ಲ. ಈ ಘಟನೆಗೆ ಕ್ಯಾಪ್ಟನ್, ಮಾಲೀಕರು ಮತ್ತು ಒಎನ್‌ಜಿಸಿ ಎಲ್ಲರೂ ಜವಾಬ್ದಾರರು ಎಂದು ಆರೋಪಿಸಿದ್ದಾರೆ. ಬಳಿಕ ಅಲ್ಲಿಂದ ಹಿಂದುರುಗಲು ನಿರ್ಧರಿಸಿದರೂ ಅದು ಆಗಾಗಲೇ ತಡವಾಗಿತ್ತು ಎಂದೂ ರೆಹಮಾನ್ ಶೇಖ್‌ ಹೇಳಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ಕಾರ್ತಿಕಾದಲ್ಲಿ ಮಾನ್ಸೂನ್ ಡಬಲ್ ಧಮಾಕಾ ಆಫರ್ ಆರಂಭ…

Spread the love ಕಾರ್ತಿಕಾದಲ್ಲಿ ಮಾನ್ಸೂನ್ ಡಬಲ್ ಧಮಾಕಾ ಆಫರ್ ಆರಂಭ… ಖರೀದಿಗಾಗಿ ಮುಗಿ ಬೀಳುತ್ತಿರುವ ಗ್ರಾಹಕರು!!! ಮಾನ್ಸೂನ್ ಆರಂಭಗೊಂಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ