ನ್ಯೂಯಾರ್ಕ್ – ಕೊರೋನಾ ಸಂಬಂಧಿತ ಲಸಿಕೆ ಪಡೆದಲ್ಲಿ ಮಾಸ್ಕ್ ಹಾಕುವುದು ಅಗತ್ಯವಿಲ್ಲ ಎಂದು ಅಮೇರಿಕಾದ ರೋಗ ನಿಯಂತ್ರಣ ಮಂಡಳಿ ತಿಳಿಸಿದೆ.
ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡವರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಅಗತ್ಯವಿಲ್ಲ ಎಂದು ಮಂಡಳಿ ತಿಳಿಸಿದೆ. ಅಮೇರಿಕಾ ಅಧ್ಯಕ್ಷ ಜೊ ಬೈಡನ್ ಕೂಡಾ ಈ ಹೇಳಿಕೆಯನ್ನು ಶೇರ್ ಮಾಡಿದ್ದಾರೆ.
ಇದರಿಂದಾಗಿ ಅಮೇರಿಕಾದಲ್ಲಿ ಲಸಿಕೆ ಪಡೆಯಲು ಇನ್ನಷ್ಟು ಜನರು ಮುಂದೆ ಬರಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಆದರೆ ಭಾರತದಲ್ಲಿ ಇಂತಹ ಮಾರ್ಗಸೂಚಿ ಹೊರಬಿದ್ದಿಲ್ಲ. ಲಸಿಕೆ ಪಡೆದವರೂ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಖಡ್ಡಾಯ ಎಂದೇ ತಿಳಿಸಲಾಗಿದೆ.
Laxmi News 24×7