Breaking News
Home / ರಾಜಕೀಯ / ನಿಮ್ಮಲ್ಲಿರುವ 50, 200 ರೂ. ನೋಟುಗಳು ನಕಲಿ ಇರಬಹುದು ಪರಿಶೀಲಿಸಿಕೊಳ್ಳಿ : ಆರ್ ಬಿ ಐ

ನಿಮ್ಮಲ್ಲಿರುವ 50, 200 ರೂ. ನೋಟುಗಳು ನಕಲಿ ಇರಬಹುದು ಪರಿಶೀಲಿಸಿಕೊಳ್ಳಿ : ಆರ್ ಬಿ ಐ

Spread the love

ನವ ದೆಹಲಿ : ಸಾರ್ವ ಜನಿಕ ವಲಯದಲ್ಲಿ ಇತ್ತೀಚೆಗೆ 50 ಹಾಗೂ 200 ರೂ.ಗಳ ನಕಲಿ ನೋಟುಗಳು ಭಾರಿ ಪ್ರಮಾಣದಲ್ಲಿ ಹರಿದಾಡುತ್ತಿವೆ ಎಂಬ ಸ್ಫೋಟಕ ಮಾಹಿತಯೊಂದು ಹೊರಬಂದಿದೆ.

ನಕಲಿ ನೋಟುಗಳ ಹಾವಳಿ ಹೆಚ್ಚಾಗಿರುವುದರಿಂದ ಆರ್ ಬಿ ಐ ಜನರಿಗೆ ನಕಲಿ ನೋಟುಗಳ ಬಗ್ಗೆ ಅರಿವು ಮೂಡಿಸಲು ಮುಂದಾಗಿದೆ. ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ನಕಲಿ ನೋಟುಗಳ ಬಗ್ಗೆ ಎಚ್ಚರ ವಹಿಸಿ ಎಂದು ಆರ್ ಬಿ ಐ ಸಾರ್ವಜನಿಕರಿಗೆ ಮನವಿ ಮಾಡಿದೆ.

ನಮ್ಮಲ್ಲಿರುವ ನೋಟುಗಳು ನಕಲಿಯೋ ಅಥವಾ ಅಸಲಿಯೋ ಎನ್ನುವುದನ್ನು ಪತ್ತೆ ಹಚ್ಚುವುದು ಹೇಗೆ ಎನ್ನುವುದಕ್ಕೆ ಉತ್ತರವಾಗಿ ಆರ್ ಬಿ ಐ ನಕಲಿ ನೋಟುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.

ಹಣಕಾಸು ಜಾಗೃತಿ ಸಪ್ತಾಹದ (Financial Awareness Week) ಅಂಗವಾಗಿ ರಿಸರ್ವ್ ಬ್ಯಾಂಕ್ ನಕಲಿ ನೋಟುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರೀಯ ಬ್ಯಾಂಕುಗಳ ಪ್ರಾದೇಶಿಕ ನಿರ್ದೇಶಕ ಲಕ್ಷ್ಮೀಕಾಂತ್ ರಾವ್ ಹಲವು ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇನ್ನು, ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧ ಪಟ್ಟಂತೆ ಸಾರ್ವಜನಿಕರಲ್ಲಿ ಏನಾದರು ದೂರುಗಳಿದ್ದರೇ, ಲೋಕಪಾಲ್ ಮುಂದೆ ಯಾವುದೇ ಸಂಸ್ಥೆಯ ವಿರುದ್ಧ ಆನ್ ಲೈನ್ ಮೂಲಕವೆ ದೂರು ಸಲ್ಲಿಸಬಹುದಾಗಿದೆ. ಗ್ರಾಹಕರು ಲೋಕಪಾಲ್ ನ ಅಧಿಕೃತ ವೆಬ್ ಸೈಟ್ https://cms.rbi.org.in. ಗೆ ಲಾಗ್ ಇನ್ ಆಗುವುದರ ಮೂಲಕ ತಮ್ಮ ಯಾವುದೇ ರೀತಿಯ ದೂರುಗಳನ್ನು ಸಲ್ಲಿಸಬಹುದಾಗಿದೆ.

50 ರೂ ನೋಟು ನಕಲಿಯೇ ಎಂದು ಹೇಗೆ ಗುರುತಿಸಬಹುದು..?

-50 ಅನ್ನು ದೇವನಾಗರಿಯಲ್ಲಿ ಬರೆಯಲಾಗಿರುತ್ತದೆ

-ಮಧ್ಯದಲ್ಲಿ ಮಹಾತ್ಮ ಗಾಂಧಿ ಫೋಟೋ ಇದೆ

-ನಾನ್ ಮೆಟಲಿಕ್ ಸೇಫ್ಟಿ ಥ್ರೆಡ್ ಇರುತ್ತದೆ

-ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನವಿದೆ

-ಎಲೆಕ್ಟ್ರೋ ಟೈಪ್ 50 ವಾಟರ್ ಮಾರ್ಕ್ ಹೊಂದಿರುತ್ತದೆ

-ನಂಬರ್ ಪ್ಯಾನಲ್ ಅನ್ನು ಮೇಲೆ ಎಡಭಾಗದಲ್ಲಿ ಮತ್ತು ಕೆಳಗೆ ಬಲಭಾಗದಲ್ಲಿ ಸಣ್ಣದರಿಂದ ದೊಡ್ಡ ಗಾತ್ರದಲ್ಲಿ ಬರೆಯಲಾಗಿದೆ.

-50 ರೂಪಾಯಿ ನೋಟನ್ನು ಯಾವ ವರ್ಷ ಮುದ್ರಿಸಲಾಗಿದೆ ಎಂಬುದನ್ನು ನಮೂದಿಸಲಾಗಿರುತ್ತದೆ.

-ಸ್ವಚ್ಛ ಭಾರತ್ ನ ಲೋಗೊ ಮತ್ತು ಸ್ಲೋಗನ್ 50 ರೂಪಾಯಿ ನೋಟಿನಲ್ಲಿ ಇರುತ್ತದೆ.

200 ರೂಪಾಯಿ ನೋಟಿನಲ್ಲೂ ಇಂಥಹ ಕೆಲವು ವಿಚಾರಗಳಿರುತ್ತವೆ.

– ದೇವನಾಗರಿಯಲ್ಲಿ 200 ಎಂದು ಬರೆಯಲಾಗಿರುತ್ತದೆ

-ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಚಿತ್ರ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸಣ್ಣ ಅಕ್ಷರಗಳಲ್ಲಿ 200 ಎಂದು ಬರೆಯಲಾಗಿರುತ್ತದೆ

– ಬಣ್ಣ ಬದಲಾವಣೆ ಸೇರಿದಂತೆ ನಾನ್ ಮೆಟಲಿಕ್ ಸೇಫ್ಟಿ ಥ್ರೆಡ್ ಇರುತ್ತದೆ

-ನೋಟನ್ನು ತಿರುಗಿಸಿ ನೋಡಿದಾಗ ಸೇಫ್ಟಿ ಥ್ರೆಡ್ ನ ಬಣ್ಣವು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಗುತ್ತದೆ

– ಗವರ್ನರ್ ಸಹಿ ಇರುತ್ತದೆ

– ರಿಸರ್ವ್ ಬ್ಯಾಂಕಿನ ಚಿಹ್ನೆ, ಮಹಾತ್ಮ ಗಾಂಧಿ ಭಾವಚಿತ್ರ ಮತ್ತು ಎಲೆಕ್ಟ್ರೋ ಟೈಪ್ 200 ವಾಟರ್‌ಮಾರ್ಕ್ ಅನ್ನು ಹೊಂದಿರತ್ತದೆ

-ಬಲಭಾಗದಲ್ಲಿ ಅಶೋಕ ಸ್ತಂಭದ ಲಾಂಛನವಿದೆ


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ