Breaking News

ರಾಜ್ಯಸಭೆಯಲ್ಲಿ ಮೋದಿ ಕಣ್ಣೀರಿನ ನಾಟಕ : ಶಶಿ ತರೂರ್ ಟೀಕೆ

Spread the love

ನವದೆಹಲಿ, ಫೆ.11- ರಾಜ್ಯಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಆಜಾದ್ ಅವರ ರಾಜ್ಯಸಭೆ ಅವಧಿ ಮುಗಿದಿದ್ದರಿಂದ ಭಾವನಾತ್ಮಕವಾಗಿ ಕಣ್ಣೀರು ಹರಿಸಿದ್ದನ್ನು ಕಾಂಗ್ರೆಸ್ ಮುಖಂಡ, ಸಂಸದ ಶಶಿ ತರೂರ್ ಟೀಕಿಸಿದ್ದಾರೆ. ಪ್ರಧಾನಿಯವರು ಬುಧವಾರ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರ ಮೇಲೆ ತೋರಿದ ಭಾವನಾತ್ಮಕ ವಿದಾಯ ಭಾಷಣ ಒಂದು ರೀತಿಯಲ್ಲಿ ಕಲಾತ್ಮಕವಾಗಿ ರಚಿಸಲಾದ ಪ್ರದರ್ಶನ ಎನಿಸುತ್ತದೆ ಎಂದಿದ್ದಾರೆ.

ಮಾಜಿ ಉಪಾಧ್ಯಕ್ಷ ಹಮೀದ್ ಅನ್ಸಾರಿ ಅವರ ಬೈ ಮೆನಿ ಎ ಹ್ಯಾಪಿ ಆಕ್ಸಿಡೆಂಟ್ ರಿಕಲೆಕ್ಷನ್ಸ್ ಆಫ್ ಎ ಲೈಫ್ ಪುಸ್ತಕದ ಚರ್ಚೆಯಲ್ಲಿ ಭಾಗವಹಿಸಿದ ಶಶಿ ತರೂರ್, ಪ್ರಧಾನ ಮಂತ್ರಿಯವರ ಆಜಾದ್ ವಿದಾಯ ಭಾಷಣ ಬಹಳ ಕಲಾತ್ಮಕವಾಗಿ ರಚಿಸಿಲಾದ ಪ್ರದರ್ಶನದಂತಿತ್ತು ಎಂದು ಹೇಳಿದ್ದಾರೆ.ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಮಾತನಾಡುತ್ತಾ, ಇತ್ತೀಚೆಗೆ ಕಣ್ಣಿರು ಸುರಿಸಿದ ರೈತ ನಾಯಕ ಟಿಕಾಯಿತ್ ಅವರ ಕಣ್ಣೀರಿಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಕಣ್ಣೀರು ಸಹ ಹೊಂದಿದ್ದಾರೆಂದು ತರೂರ್ ಪ್ರತಿಕ್ರಿಯಿಸಿದರು. ಪ್ರಧಾನಿ ಅವರು ಕಾಂಗ್ರೆಸ್ ಹಿರಿಯ ನಾಯಕ ಆಜಾದ್ ಅವರೊಂದಿಗಿನ ನಿಕಟ ಒಡನಾಟವನ್ನು ನೆನಪಿಸಿಕೊಳ್ಳುವಾಗ ಭಾವುಕರಾಗಿ ಮಾತನಾಡಿದ್ದಾರೆ. ಇಂತಹ ಘಟನೆ ಹಲವು ಬಾರಿ ನಡೆದಿದೆ..


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ