ಬೆಳಗಾವಿ: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಪ್ರತಿ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಬೆಳಗಾವಿ ಜಿಲ್ಲೆಯ 14 ತಾಲ್ಲೂಕಿನಲ್ಲಿ ಡಿ.22, 27 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊಲದ ಹಂತದಲ್ಲಿ ಬೆಳಗಾವಿ -57, ಖಾನಾಪುರ -51, ಹುಕ್ಕೇರಿ-52, ಬೈಲಹೊಂಗಲ-33, ಕಿತ್ತೂರು-16, ಗೋಕಾಕ-32, ಮೂಡಲಗಿ-32 ಒಟ್ಟು 261 ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ ಸವದತ್ತಿ-41, ರಾಮದುರ್ಗ-33, ಚಿಕ್ಕೋಡಿ-36, ನಿಪ್ಪಾಣಿ-27, ಅಥಣಿ-41, ಕಾಗವಾಡ-09, ರಾಯಬಾಗ-33 ಒಟ್ಟು 220 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯಲಿದೆ.
ಮೊಲದ ಹಂತದ ಚುನಾವಣೆಗೆ ಡಿ.7 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ. ಡಿ.11 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಡಿ.14 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
https://youtu.be/34Ks3HhFgcM
ಇನ್ನೂ ಎರಡನೇ ಹಂತದ ಚುನಾವಣೆಗೆ 11 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ. ಡಿ.16 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಡಿ.19 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಡಿ.30ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರಗಳಲ್ಲಿ ಮತಗಳ ಎಣಿಕೆ ನಡೆಯಲಿವೆ